ಕೂರ ತಂಙಳ್ ಜನಾಝ ಕೆಲವೇ ನಿಮಿಷಗಳಲ್ಲಿ ಉಳ್ಳಾಲಕ್ಕೆ: ಅಂತಿಮ ದರ್ಶನಕ್ಕೆ ಬರುವವರಿಗೆ ರಸ್ತೆ ಬದಲಾವಣೆ ಬಗ್ಗೆ ಮಾಹಿತಿ

Prasthutha|

ಉಳ್ಳಾಲ: ಇಂದು ಬೆಳಿಗ್ಗೆ ಕೇರಳದ ಎಟ್ಟಿಕುಳಂನಲ್ಲಿ ಹೃದಯಾಘಾತದಿಂದ ನಿಧನರಾದ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಕೂರ ಅವರ ಜನಾಝ ಈಗಾಗಲೇ ಕಾಸರಗೋಡು ತಲುಪಿದ್ದು, ರಾತ್ರಿ 7.30ರ ಹೊತ್ತಿಗೆ ಉಳ್ಳಾಲ ತಲುಪಲಿದೆ.

- Advertisement -

ದರ್ಗಾ ವಠಾರದಲ್ಲಿ ಸಾರ್ವಜನಿಕರಿಗೆ ತಂಙಳ್ ರವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇರಲಿದೆ. ಉಳ್ಳಾಲ ದರ್ಗಾಕ್ಕೆ ಆಗಮಿಸುವವರು ಓವರ್ ಬ್ರಿಡ್ಜ್ ಮೂಲಕ ಮಾಸ್ತಿಕಟ್ಟೆಯವರೆಗೆ ಮಾತ್ರ ವಾಹನದಲ್ಲಿ ಬರಲು ಅವಕಾಶ ಕಲ್ಪಿಸಲಾಗಿದೆ.

ಮಾಸ್ತಿಕಟ್ಟೆಯಿಂದ ಕಾಲ್ನಡಿಗೆಯಲ್ಲಿಯೇ ದರ್ಗಾ ತಲುಪಬೇಕು. ದರ್ಗಾಕ್ಕೆ ಆಗಮಿಸಿ ಹಿಂದಿರುಗುವವರು ಸೋಮೇಶ್ವರ ಮಾರ್ಗವಾಗಿ ತೆರಳಬೇಕು ಎಂದು ಎಸಿಪಿ ಧನ್ಯಾ ತಿಳಿಸಿದ್ದಾರೆ.

- Advertisement -

ವಾಹನ ಪಾರ್ಕಿಂಗ್‌ಗೆ ಉಳ್ಳಾಲಬೈಲು, ಹಝ್ರತ್ ಶಾಲೆ, ಉಳ್ಳಾಲ ಬೀಚ್, ಮಾಸ್ತಿಕಟ್ಟೆ, ಅಬ್ಬಕ್ಕ ಸರ್ಕಲ್, ಭಗವತಿ ದೇವಸ್ಥಾನ ಬಳಿ ವ್ಯವಸ್ಥೆ ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಅಂತಿಮ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇರುವುದರಿಂದ ಸೂಕ್ತ ಬಂದೋಬಸ್ತ್ ಗಾಗಿ ಎಸಿಪಿ ಧನ್ಯಾ ನೇತೃತ್ವದಲ್ಲಿ ದರ್ಗಾ ಕಚೇರಿಯಲ್ಲಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಉಳ್ಳಾಲ ಠಾಣಾ ಇನ್ ಸ್ಪೆಕ್ಟರ್ ಬಾಲಕೃಷ್ಣ, ಉಳ್ಳಾಲ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ಸಮಿತಿ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.

ಉಳ್ಳಾಲ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಲ್ ರವರ ಜನಾಝವನ್ನು ಉಳ್ಳಾಲದಿಂದ ಸುಮಾರು ರಾತ್ರಿ ಒಂಬತ್ತು ಗಂಟೆಗೆ ಪುತ್ತೂರು ತಾಲೂಕಿನ ಕೂರದಲ್ಲಿ ದಫನ ಕಾರ್ಯ ಕೈಗೊಳ್ಳಲಾಗುತ್ತಿದೆ.



Join Whatsapp