ಉಪ್ಪುಂದ: ಹೊಳೆಯಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಮೀನುಗಾರ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಮಡಿಕಲ್‌ನಲ್ಲಿ ಸಂಭವಿಸಿದೆ.
ಉಪ್ಪುಂದ ಗ್ರಾ. ಪಂ. ವ್ಯಾಪ್ತಿಯ ಮಡಿಕಲ್ ಕೊಂಬಾಡಿ ಮನೆ ರಾಮದಾಸ (40) ಮೃತಪಟ್ಟವರು.
ಉದಯ ಎಂಬವರ ಜತೆ ರಾಮದಾಸ ಮಡಿಕಲ್ ಹೊಳೆಗೆ ಮೀನುಗಾರಿಕೆಗೆ ಹೋಗಿದ್ದು, ಬಲೆ ಹಾಕಿ ಮೀನುಗಾರಿಕೆ ಮಾಡುತ್ತಿರುವ ಸಮಯ ರಾಮದಾಸ ಬಲೆಯನ್ನು ಎಳೆಯುತ್ತಿರುವಾಗ ಆಕಸ್ಮಿಕವಾಗಿ ನೀರಿಗೆ ಕುಸಿದು ಬಿದ್ದಿದ್ದಾರೆ.
ತಕ್ಷಣ ಬೈಂದೂರಿನ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.