ಕುಂದಾಪುರ: ಡ್ರೈವರ್ ಇಲ್ಲದೆ ಚಲಿಸಿದ ಬಸ್; ಕಾರಿಗೆ ಡಿಕ್ಕಿ

Prasthutha|

ಕುಂದಾಪುರ: ಡಿಪೋದಲ್ಲಿ ನಿಲ್ಲಿಸಿದ್ದ ಬಸ್ಸೊಂದು ಡ್ರೈವರ್ ಇಲ್ಲದೆ ಚಲಿಸಿ ಕಾರಿಗೆ ಡಿಕ್ಕಿಯಾಗಿ ನಿಂತ ಘಟನೆ ಕುಂದಾಪುರ ಹೊರವಲಯದ ಹಂಗಳೂರು ಎಂಬಲ್ಲಿ ನಡೆದಿದೆ.

- Advertisement -

ಈ ಘಟನೆ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಬಸ್ ಶುಚಿಗೊಳಿಸಿ ಸಿಬ್ಬಂದಿಗಳು ಬಸ್ಸಿನಿಂದ ಇಳಿದಿದ್ದರು. ಇದಾದ ಬಳಿಕ ಡಿಪೋದಿಂದ ಬಸ್ಸು ಮುಂದಕ್ಕೆ ಚಲಿಸಿ ಸರ್ವೀಸ್ ರಸ್ತೆಯಿಂದ ಎರಡು ಹೆದ್ದಾರಿ ದಾಟಿ ಮತ್ತೊಂದು ಸರ್ವೀಸ್ ರಸ್ತೆಗೆ ಅಡ್ಡಲಾಗಿದ್ದ ಬ್ಯಾರಿಕೇಡ್ ಮುರಿದು ಸಾಗಿ ಹೋಟೆಲ್ ಎದುರು ನಿಂತಿದ್ದ ಕಾರಿಗೆ ಡಿಕ್ಕಿಯಾಗಿದೆ.

- Advertisement -

ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಕಮ್ಮಿಯಿದ್ದರಿಂದ ಅದೃಷ್ಟವಶಾತ್ ಭಾರೀ ಅವಘಡ ತಪ್ಪಿದೆ ಎನ್ನಲಾಗಿದೆ.



Join Whatsapp