ಕುಂಬಳೆ ಬೆಡಿ: ಲಕ್ಷಾಂತರ ರೂ. ಬೆಲೆಬಾಳುವ ಸುಡುಮದ್ದು ಪೊಲೀಸರ ವಶಕ್ಕೆ

Prasthutha|

ಕುಂಬಳೆ: ಇಲ್ಲಿನ ಕಣಿಪುರ ದೇವಸ್ಥಾನದಲ್ಲಿ ನಡೆಯುವ ಪ್ರಸಿದ್ಧ “ಕುಂಬಳೆ ಬೆಡಿ’ ಇಂದು ನಡೆಯಲಿದ್ದು, ಅದಕ್ಕಾಗಿ ಪಾಲಕ್ಕಾಡಿನ ವಡಕ್ಕಾಂಚೇರಿ ಆಲತ್ತೋಡಿನ ಸುಡುಮದ್ದು ಘಟಕದಲ್ಲಿ ಸಿದ್ಧಪಡಿಸಿ ಇರಿಸಿದ್ದ ಲಕ್ಷಾಂತರ ರೂ. ಬೆಲೆಬಾಳುವ ಸುಡುಮದ್ದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

- Advertisement -

ಸುಡುಮದ್ದು ತಯಾರಿ ಗುತ್ತಿಗೆದಾರ ಚಾಲಕುಡಿಯ ವಿ.ಸಿ. ವರ್ಗೀಸ್‌ ಅವರಿಗೆ ಇಷ್ಟೊಂದು ಪ್ರಮಾಣದಲ್ಲಿ ತಯಾರಿಗೆ ಪರವಾನಿಗೆ ಇಲ್ಲದೇ ಇರುವುದರಿಂದ ಸುಡುಮದ್ದನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಆರಿಕ್ಕಾಡಿಯ ಬೆಡಿ ಅಶ್ರಫ್‌ ಕೆಲವು ವರ್ಷಗಳಿಂದ ಸುಡುಮದ್ದು ಸಿದ್ಧ ಪಡಿಸುತ್ತಿದ್ದರು. ಕಳೆದ ವರ್ಷ ಜಾತ್ರೆ ಸಂದರ್ಭದಲ್ಲಿ ಅವರನ್ನೂ ಬಂಧಿಸಲಾಗಿತ್ತು.

- Advertisement -



Join Whatsapp