ರಾಮನಗರ ಛಿದ್ರ ಮಾಡಿದವರು ಕುಮಾರಸ್ವಾಮಿ: ಡಿಕೆ ಶಿವಕುಮಾರ್

Prasthutha|

ಬೆಂಗಳೂರು: ರಾಮನಗರ ಛಿದ್ರ ಮಾಡಿದವರು ನಾವಲ್ಲ, ಹೆಚ್. ಡಿ.ಕುಮಾರಸ್ವಾಮಿ ಎಂದು ಉಪಮುಖ್ಯಂತ್ರಿ ಡಿಕೆ ಶಿವಕುಮಾರ್ ಆರೋಪ ಮಾಡಿದ್ದಾರೆ.

- Advertisement -


ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಲು ಹೋಗುವುದಿಲ್ಲ. ರಾಮನಗರದಲ್ಲಿ ಹೆಚ್ಡಿ ಕುಮಾರಸ್ವಾಮಿ ಆಸ್ತಿ ಮಾಡಿಲ್ವೇ? ಜಮೀನು ರೇಟ್ ಎಷ್ಟಿದೆ ಕೇಳಿ. ರಾಮನಗರಕ್ಕೆ ನನ್ನ ಕೊಡುಗೆ ಏನು, ನಿಮ್ಮ ಕೊಡುಗೆ ಏನು ಎಂಬುವುದರ ಬಗ್ಗೆ ವಿಧಾನಸೌಧಕ್ಕೆ ಬನ್ನಿ ಚರ್ಚೆ ಮಾಡೋಣ. ಏಕಾಂಗಿಯಾಗಿ ಚರ್ಚೆಗೆ ಬನ್ನಿ ಅಂತ ನಮ್ರತೆಯಿಂದ ಮನವಿ ಮಾಡುತ್ತೇನೆ ಎಂದು ಬಹಿರಂಗ ಚರ್ಚೆಗೆ ಆಹ್ವಾನಿಸಿದರು.


ಸಮಿಶ್ರ ಸರ್ಕಾರ ಪತನ ವಿಚಾರವಾಗಿ ಮಾತನಾಡಿದ ಅವರು ಮಾಜಿ ಸಿಎಂ ಕುಮಾರಸ್ವಾಮಿಗೆ ಬಹಳ ನಮ್ರತೆಯಿಂದ ಹೇಳುತ್ತೇನೆ. ನಿಮ್ಮ ನುಡಿಮುತ್ತುಗಳನ್ನು ಅಸೆಂಬ್ಲಿಯಲ್ಲಿ ಉದುರಿಸಿದ್ದೀರಾ. ನಿಮ್ಮ ಸರ್ಕಾರ, ನಮ್ಮ ಸರ್ಕಾರವನ್ನು ಯಾರು ಬೀಳಿಸಿದರು ಅಂತ ಹೇಳಿದ್ರಿ. ಕೆಲ ಬಾರಿ ನನ್ನ ಹೆಸರು, ಕೆಲ ಬಾರಿ ಸಿದ್ದರಾಮಯ್ಯ ಹೆಸರು ಹೇಳಿದ್ರಿ. ಆದರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹಣ ನೀಡಿ ಸರ್ಕಾರ ಬೀಳಿಸಿದರು ಅಂತ ನೀವೇ ಹೇಳಿದ್ದೀರಿ. ವಿಧಾನಸಭೆಯಲ್ಲೇ ಹೆಚ್ ಡಿ ಕುಮಾರಸ್ವಾಮಿಯವರು ಮಾತನಾಡಿದ ಸಾಕ್ಷಿಗಳು ಸಾಕಷ್ಟಿವೆ ಎಂದರು.

Join Whatsapp