ಬಂಡೆಯನ್ನು KRS ಗೇಟ್‌ಗೆ ಇಟ್ಟುಬಿಡಿ: ಡಿಕೆಶಿ ಬಗ್ಗೆ ಹೆಚ್​ಡಿಕೆ ವ್ಯಂಗ್ಯ

Prasthutha|

ಮಂಡ್ಯ: ಕಳೆದ ನಾಲ್ಕೈದು ವರ್ಷ ಉತ್ತಮ ಮಳೆಯಾಗಿತ್ತು. ಇದರಿಂದ ರೈತರಿಗೆ ಆತಂಕ ದೂರವಾಗಿತ್ತು. ಇದೀಗ ಮಳೆ ಕೊರತೆಯಿಂದ ರೈತರಿಗೆ ಆತಂಕವಾಗಿದೆ. 125 ವರ್ಷದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಬೆಂಗಳೂರು ಚಿಂತೆ ಬಿಟ್ಟು ಮೊದಲು ನೀರಿನ ಸಮಸ್ಯೆ ಬಗೆಹರಿಸಿ ಎಂದು ಡಿಸಿಎಂ ಡಿಕೆ ಶಿವಕುಮಾರ್​ಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಟಾಂಗ್​ ನೀಡಿದರು.

- Advertisement -

ಈ ವೇಳೆ ಡಿ.ಕೆ.ಶಿವಕುಮಾರ್‌ ಅವರನ್ನು ಬಂಡೆ ಅಂತಾರೆ ಎಂದ ಮಹಿಳೆಗೆ ಆ ಬಂಡೆಯನ್ನು ತೆಗೆದುಕೊಂಡು ಹೋಗಿ KRS ಗೇಟ್‌ಗೆ ಇಟ್ಟುಬಿಡಿ ಎಂದು ವ್ಯಂಗ್ಯವಾಡಿದ್ದಾರೆ.

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಹಿತರಕ್ಷಣಾ ಸಮಿತಿ ಪ್ರತಿಭಟನೆ ಸ್ಥಳದಲ್ಲಿ ಮಾತನಾಡಿದ ಅವರು, ಇಂದು ಗಂಭೀರ ಪರಿಸ್ಥಿತಿಯಲ್ಲಿ ರೈತರು ಧ್ವನಿ ಎತ್ತಿದ್ದಾರೆ. ಪಕ್ಷ ಬೇದ ಮರೆತು ಎಲ್ಲ ಹೋರಾಟ‌ ಮಾಡುತ್ತಿದ್ದಾರೆ. 30 ಸಾವಿರ ಕೋಟಿ ಬೆಳೆ‌ ನಷ್ಟ ಆಗಿದೆ. ಭತ್ತ, ಕಬ್ಬನ್ನು ಬೆಳೆಯುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾವೇರಿ ನಿರ್ವಹಣಾ ಪ್ರಾಧಿಕಾರದಲ್ಲಿ ವಿಷಯ ಮಂಡನೆ ಮಾಡುವಲ್ಲಿ ನಮ್ಮ ಅಧಿಕಾರಿಗಳು ಲಘುವಾಗಿ ನಡೆದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

- Advertisement -

ಜಯ ಸಿಗುವವರೆಗೂ ರೈತರ ಹೋರಾಟಕ್ಕೆ ಬೆಂಬಲ ಇದೆ. ಯಾವುದೇ ನ್ಯಾಯಾಂಗ ನಿಂದನೆ ಆಗಲ್ಲ. ನೀವು ತಕ್ಷಣ ನೀರು ನಿಲ್ಲಿಸಿ. ಸುಪ್ರೀಂಕೋರ್ಟ್ ತೀರ್ಪಿನಂತೆ ನೀರು ಬಿಡಬೇಕು. ಇಲ್ಲದಿದ್ದರೇ ನ್ಯಾಯಾಂಗ ನಿಂದನೆ ಆಗುತ್ತೆ ಅಂತಾ ರಾಜ್ಯ ಸರ್ಕಾರದವರು ಹೇಳುತ್ತಿದ್ದಾರೆ. ತಮಿಳುನಾಡಿಗೆ ನೀರು ನಿಲ್ಲಿಸಿದ್ದರೆ ನ್ಯಾಯಾಂಗ ನಿಂದನೆ ಆಗಲ್ಲ. ಸುಪ್ರೀಂಗೆ ನೀರು ಬಿಡಲು ಆಗಲ್ಲ ಎಂದು ಮೇಲ್ಮನವಿ ಸಲ್ಲಿಸಿ ಎಂದು 2016 ತೀರ್ಪು ಪ್ರಸ್ತಾಪಿಸಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

Join Whatsapp