ಕೇಸರಿ ಬಣ್ಣ ತ್ಯಾಗ, ಶೌರ್ಯದ ಸಂಕೇತ, ಕುಮಾರಸ್ವಾಮಿ ಸಂಕೋಚ ಪಡಬೇಕಿಲ್ಲ: ಸಿ.ಟಿ. ರವಿ

Prasthutha|

ಹಾಸನ: ಕೇಸರಿ ಬಣ್ಣ ತ್ಯಾಗ, ಶೌರ್ಯದ ಸಂಕೇತ, ಕೇಸರಿ ಶಾಲು ಹಾಕಿದ್ದಕ್ಕೆ ಕುಮಾರಸ್ವಾಮಿ ಸಂಕೋಚ ಪಡಬೇಕಿಲ್ಲ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದರು.

- Advertisement -


ಎಚ್.ಡಿ.ಕುಮಾರಸ್ವಾಮಿ ಕೇಸರಿ ಶಾಲು ಹಾಕಬಾರದಿತ್ತು’ ಎಂಬ ಎಚ್.ಡಿ. ದೇವೇಗೌಡರ ಹೇಳಿಕೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.

ಅರ್ಜುನನ ಧ್ವಜದ ಬಣ್ಣವೂ ಕೇಸರಿ, ಋಷಿಮುನಿಗಳು ತ್ಯಾಗದ ಸಂಕೇತವಾಗಿ ಬಳಸಿದರೆ, ಕ್ಷತ್ರಿಯರು ಕೇಸರಿಯನ್ನು ಶೌರ್ಯದ ಸಂಕೇತವಾಗಿ ಬಳಸಿದ್ದರು. ಕೇಸರಿ ಬಗ್ಗೆ ನಮಗೇನು ಸಂಕೋಚ ಇಲ್ಲ, ನಮಗೆ ಹೆಮ್ಮೆ ಇದೆ. ಕೇಸರಿ ಶಾಲು ಹಾಕಿದ್ದಕ್ಕೆ ಕುಮಾರಸ್ವಾಮಿ ಸಂಕೋಚ ಪಡಬೇಕಿಲ್ಲ. ಅದು ಅಲ್ಲದೇ ಅಂದು ಕೇವಲ ರಾಜಕೀಯ ಪಕ್ಷದ ನಾಯಕರು ಭಾಗವಹಿಸಿರಲಿಲ್ಲ, ಹಿಂದೂ ಸಂಘಟನೆಗಳು ಕರೆಕೊಟ್ಟಿದ್ದ ಪಾದಯಾತ್ರೆಯಾಗಿತ್ತು ಎಂದು ಹೇಳಿದರು.



Join Whatsapp