March 9, 2021

ಸೆಕ್ಸ್ CD ಹಗರಣ | ಜಾರಕಿಹೊಳಿ ಅಮಾಯಕ : ಕುಮಾರಸ್ವಾಮಿ

ಬೆಂಗಳೂರು : ಸೆಕ್ಸ್ CD ಹಗರಣದಲ್ಲಿ ರಮೇಶ್ ಜಾರಕಿಹೊಳಿ ಅಮಾಯಕರು. ಬಿಜೆಪಿಯವರು ಬಾಂಬೆಗೆ ಶಾಸಕರನ್ನು ಕರೆದುಕೊಂಡು ಹೋದ್ರು. ಯಾರ್ ಯಾರ್ ಬಗ್ಗೆ ಏನೇನು ಷಡ್ಯಂತ್ರ ಮಾಡಿದ್ದಾರೋ ನನಗೆ ಗೊತ್ತಿಲ್ಲ. 2, 3, 4 ಜನರ ಬಗ್ಗೆ ಜಾರಕಿಹೊಳಿಯೇ ಹೇಳಬೇಕು ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತಂತೆ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಡು-ಹೆಣ್ಣಿನ ಸಂಪರ್ಕ, ಸಂಘರ್ಷ ಇಂದಿನದ್ದಲ್ಲ. ರಾಮಾಯಣ, ಮಹಾಭಾರತ ನಡೆದಿದ್ದು ಏಕೆ? ಆ ಕಾಲದಿಂದಲೂ ಇವೆಲ್ಲಾ ನಡೆಯುತ್ತಲೇ ಇವೆ. ಮನುಷ್ಯ ತಪ್ಪು ಮಾಡೋದು ಸಹಜ. ಆದ್ರೇ ಎಚ್ಚರಿಕೆಯಿಂದ ಇರಬೇಕು ಎಂದರು.

2 + 3 + 4 ಸೂತ್ರದ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಬಾಲಚಂದ್ರರನ್ನೇ ಕೇಳಬೇಕು. 2 ಅಂದ್ರೇ ಫ್ಲೈಟ್ ನಲ್ಲಿ ಕರೆದುಕೊಂಡು ಹೋದವರಾ.? 3 ಅಂದ್ರೇ ಬಾಂಬೆಯಲ್ಲಿ ನೋಡಿಕೊಂಡವರಾ.? 4 ಅಂದ್ರೆ ಬಾಂಬೆಯಿಂದ ಕರೆದುಕೊಂಡು ಬಂದವರಾ.? ಎಂಬುದಾಗಿ ಕುಮಾರ ಸ್ವಾಮಿ ಹೇಳಿದ್ದಾರೆ.

6 ಸಚಿವರು ಕೋರ್ಟ್ ಗೆ ಹೋಗಿದ್ದಾರೆ. ಇವರಿಗೆ ಈ ಐಡಿಯಾ ಕೊಟ್ಟವರು ಯಾರು? ಜನ ಇವರ ಬಗ್ಗೆ ಏನಂದುಕೊಳ್ಳಬೇಕು. ಇಂಥದನ್ನು ನೋಡಲು ನನ್ನ ಸರ್ಕಾರ ಬೀಳಿಸಬೇಕಿತ್ತಾ? ಎಂಬುದಾಗಿ ಪ್ರಶ್ನಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!