ಬೆಂಗಳೂರು: ‘ವಿದ್ಯೆ ಇಲ್ಲದೆ ಇದ್ದರೂ ಪ್ರಜ್ಞಾವಂತಿಕೆ ಬೇಕು. ಸಾಮಾನ್ಯ ಜ್ಞಾನವಿರಬೇಕು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರದ ಇತಿಹಾಸವನ್ನು ತಂದೆ ಎಚ್.ಡಿ. ದೇವೇಗೌಡರನ್ನು ಕೇಳಿ ತಿಳಿದುಕೊಳ್ಳಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರ ಜನ ಆಸ್ತಿಗಳನ್ನ ಮಾರಬೇಡಿ. ತಮ್ಮ ಭೂಮಿಗಳನ್ನು ಮಾರಿಕೊಂಡು ಹೋಗದಂತೆ ಜನತೆಗೆ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಭೂಮಿಗೆ ಒಳ್ಳೆಯ ಬೆಲೆ ಬರಲಿದೆ ಎಂದು ಹೇಳಿದ್ದೇನೆ. ರಾಮನಗರ ಜಿಲ್ಲೆಯ ಅನೇಕ ನಾಯಕರು ಉನ್ನತ ಸ್ಥಾನಗಳಲ್ಲಿ ಕೆಲಸ ಮಾಡಿದ್ದಾರೆ. ಅವರೆಲ್ಲ ಬೆಂಗಳೂರು ವ್ಯಾಪ್ತಿಯ ರಾಮನಗರದವರು.ಇದರ ಇತಿಹಾಸ, ದಾಖಲೆಗಳನ್ನ ಕುಮಾರಸ್ವಾಮಿ ಒಮ್ಮೆ ಓದಿಕೊಳ್ಳಬೇಕು ಎಂದು ಟಾಂಗ್ ಕೊಟ್ಟರು.