ಧ್ವಜ ತೆರವು ವಿಚಾರವಾಗಿ ಸರ್ಕಾರವೇ ನಕಲಿ ದಾಖಲೆ ಸೃಷ್ಟಿಸಿದೆ: ಕುಮಾರಸ್ವಾಮಿ

Prasthutha|

ಬೆಂಗಳೂರು: ಕೆರಗೋಡಿನಲ್ಲಿ ಹನುಮ ಧ್ವಜ ತೆರವು ವಿಚಾರವಾಗಿ ಸರ್ಕಾರವೇ ನಕಲಿ ದಾಖಲೆ ಸೃಷ್ಟಿಸಿದೆ ಎಂದು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

- Advertisement -


ಜೆಡಿಎಸ್ ಕಚೇರಿಯಲ್ಲಿ ಸರ್ವೋದಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಹೆಚ್ ಡಿಕೆ, ಕೆರಗೋಡಿನ ಬಸ್ ನಿಲ್ದಾಣದ ಧ್ವಜಸ್ತಂಭ ಸ್ಥಾಪನೆಗೆ ಮನವಿ ಮಾಡಿದ್ದ ಗೌರಿ ಶಂಕರ್ ಸೇವಾ ಟ್ರಸ್ಟ್, ಯಾವ ಧ್ವಜ ಅಂತ ಹೇಳಿರಲಿಲ್ಲ. ಅದಕ್ಕೆ ಅನುಮತಿ ನೀಡಲಾಗಿತ್ತು. ಈಗ ಸರ್ಕಾರವೇ ನಕಲಿ ದಾಖಲೆ ಸರ್ಕಾರ ಸೃಷ್ಟಿ ಮಾಡಿಕೊಂಡು ಆರೋಪ ಮಾಡುತ್ತಿದೆ ಎಂದರು.

ಕೆರಗೋಡು ಘಟನೆಯಲ್ಲಿ ಸರಿಯಾಗಿ ಕ್ರಮ ತೆಗೆದುಕೊಂಡಿದ್ರೆ ಒಂದು ತನಿಖೆ ಮಾಡಿಸಿ. ಅದರ ಸರ್ಟಿಫಿಕೇಟ್ ತೆಗೆದುಕೊಳ್ಳಿ. ಕೆರಗೋಡು ಘಟನೆ ತನಿಖೆ ಮಾಡಿ. ಕುಮಾರಸ್ವಾಮಿ ತಪ್ಪು ಮಾಡಿದ್ರೆ ನೇಣಿಗೆ ಹಾಕಿ. ನೀವು ತಪ್ಪು ಮಾಡಿದ್ರೆ ಏನ್ ಮಾಡಬೇಕು ಹೇಳಿ ಎಂದು ಪ್ರಶ್ನಿಸಿದರು. ನಾನು ಸೋಮವಾರದ ಭಾಷಣದಲ್ಲಿ ಬೆಂಕಿ ಹಚ್ಚಿ, ಫ್ಲೆಕ್ಸ್ ಹರಿಯಿರಿ ಅಂತ ಹೇಳಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂಬುದಾಗಿ ಆಗ್ರಹಿಸಿದ್ದೆ ಅಷ್ಟೆ. ಕೆರೆಗೋಡಿನ ಜನತೆ ಜನವರಿ 26 ರಂದು ರಾಷ್ಟ್ರ ಧ್ವಜ ಹಾರಿಸಿದ್ದಾರೆಯೇ ವಿನಃ ಸರ್ಕಾರ ಅಲ್ಲ. ಕಾಂಗ್ರೆಸ್ ಶಾಸಕರನ್ನು ಕರೆದಿಲ್ಲ ಎಂದು ಈ ಗಲಾಟೆ ಆರಂಭ ಆಗಿದೆ ಎಂದು ಅವರು ದೂರಿದ್ದಾರೆ.



Join Whatsapp