ಕುದ್ರೋಳಿ ಕಸಾಯಿಖಾನೆ ಮುಚ್ಚುವುದರಿಂದ ಸಮಸ್ಯೆ ಬಿಗಡಾಯಿಸಲಿದೆ: ಯುಟಿ ಖಾದರ್

Prasthutha|

ಮಂಗಳೂರು: ಕುದ್ರೋಳಿ ಕಸಾಯಿಖಾನೆ ಮುಚ್ಚುವಂತೆ ಪಾಲಿಕೆಯು ಗುತ್ತಿಗೆದಾರರಿಗೆ ನೋಟೀಸ್ ಜಾರಿ ಮಾಡಿದ್ದು, ಇದರಿಂದ ಸಮಸ್ಯೆ ಬಿಗಡಾಯಿಸಲಿದೆ ಎಂದು ಯುಟಿ ಖಾದರ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು,  ಆಡು-ಕುರಿ ಮಾಂಸದ ಕುದ್ರೋಳಿಯ ಕಸಾಯಿಖಾನೆಯನ್ನು ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಸುಸಜ್ಜಿತ ಹೈಜೀನಿಕ್ ಕಸಾಯಿಖಾನೆ ಮಾಡಲು‌ ಮುಂದಾಗಿದ್ದೆವು. ಆವಾಗ ಬಿಜೆಪಿ ಇದರ ವಿರುದ್ಧ ಅಪಪ್ರಚಾರ ನಡೆಸಿತ್ತು. ಈಗ ಮಾಲಿನ್ಯ ನಿಯಂತ್ರಣ ಮಂಡಳಿ ಕಸಾಯಿಖಾನೆ ಮುಚ್ಚಲು ಪಾಲಿಕೆಗೆ ನಿರ್ದೇಶಿಸಿದೆ. ಅದರನ್ವಯ ಪಾಲಿಕೆ ಕಸಾಯಿಖಾನೆ ಗುತ್ತಿಗೆದಾರರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಕಸಾಯಿಖಾನೆ ಇದ್ದಾಗ ವ್ಯವಸ್ಥಿತ ರೂಪದಲ್ಲಿ ಮಾಂಸ ಮಾರಾಟ ನಡೆಯುತ್ತಿತ್ತು.  ಕಸಾಯಿಖಾನೆ ಮುಚ್ಚುವುದರಿಂದ ಸಮಸ್ಯೆ ಬಿಗಡಾಯಿಸಲಿದೆ ಎಂದು ತಿಳಿಸಿದರು.

ಕ್ಯಾಟರಿಂಗ್, ಶುಭ ಸಮಾರಂಭಗಳಿಗೆ ಮಾಂಸ ಪೂರೈಕೆ ಕಷ್ಟವಾಗಲಿದ್ದು, ಅನಿವಾರ್ಯವಾಗಿ ಎಲ್ಲೆಂದರಲ್ಲಿ ಮಾಂಸ ಮಾಡಿದರೆ ವಿಲೇವಾರಿ ಕಷ್ಟವಾಗಲಿದೆ. ಉತ್ತಮ ಕುರಿ, ಆಡು, ಕೋಳಿ ಮಾಂಸ ನೀಡುವುದು ಕೂಡಾ ಸರಕಾರದ ಜವಾಬ್ದಾರಿ ಎಂದು ಹೇಳಿದರು.



Join Whatsapp