ಧರ್ಮಸ್ಥಳದಿಂದ ನಾರಾವಿಗೆ ಓಡಾಡುವ KSRTC ಬಸ್ ಗೆ ಉಸ್ತುವಾರಿ ಸಚಿವರಿಂದ ಚಾಲನೆ

Prasthutha|

ಮಂಗಳೂರು: ಬೆಳ್ತಂಗಡಿ ತಾಲೂಕಿನ ಆಳದಂಗಡಿಯಲ್ಲಿ ಧರ್ಮಸ್ಥಳದಿಂದ ನಾರಾವಿ ಕಡೆಗೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಚಾಲನೆ ನೀಡಿದರು.

- Advertisement -

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ವಸಂತ ಬಂಗೇರ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕರಾದ  ಕೆ. ಮಂಜುನಾಥ ಭಂಡಾರಿ, ಮುಖಂಡರಾದ ರಕ್ಷಿತ ಶಿವರಾಂ ಭಾಗವಹಿಸಿದ್ದರು.

- Advertisement -

ಕೆ.ಎಸ್.ಆರ್ .ಟಿ .ಸಿ ಅಧಿಕಾರಿಗಳು ಇನ್ನಿತರ ಅಧಿಕಾರಿಗಳು ಹಾಗೂ ಸಾರ್ವಜನಿಕರು  ಉಪಸ್ಥಿತರಿದ್ದರು.

Join Whatsapp