ರಿಕ್ಷಾಗೆ ಡಿಕ್ಕಿ ಹೊಡೆದ KSRTC ಬಸ್: ಓರ್ವ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ

Prasthutha|

ಹಾಸನ: ರಸ್ತೆ ಬದಿ ನಿಂತಿದ್ದ ರಿಕ್ಷಾಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಓರ್ವ ಮೃತಪಟ್ಟು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.

- Advertisement -


ಇರುಮುಡಿ ಮೂರ್ತಿ (54) ಎಂಬ ವ್ಯಕ್ತಿ ಸಾವನ್ನಪ್ಪಿದ್ದು, ರಿಕ್ಷಾ ಚಾಲಕ ಮತ್ತು ಮತ್ತೋರ್ವ ಚಿಕಿತ್ಸೆ ಪಡೆಯುತ್ತಿದ್ದು ಸ್ಥಿತಿ ಚಿಂತಾಜನಕವಾಗಿದೆ.


ಹಾಸನ – ಬೆಂಗಳೂರು ನಾನ್ ಸ್ಟಾಪ್ ಬಸ್ ಬೆಂಗಳೂರಿಂದ ಹಾಸನಕ್ಕೆ ಬರುತ್ತಿತ್ತು. ಈ ವೇಳೆ, ಹಾಸನದಲ್ಲಿ ರಸ್ತೆ ಬದಿ ನಿಲ್ಲಿಸಿದ ಆಟೋಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿ, ಚಾಲಕ ಆನಂದ್ ಮತ್ತು ಪ್ರಯಾಣಿಕ ಬೆಟ್ಟೇಗೌಡ ಗಂಭೀರ ಗಾಯಗೊಂಡಿದ್ದಾರೆ.

Join Whatsapp