ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ; ಮೂವರು ವಿದ್ಯಾರ್ಥಿಗಳು ಸಾವು

Prasthutha|

ಬಳ್ಳಾರಿ: ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ದುರಂತ ಘಟನೆ ಬಳ್ಳಾರಿ ತಾಲೂಕಿನ ಹಲಕುಂದಿ ಬಳಿ ನಡೆದಿದೆ.

- Advertisement -


ಮೃತ ವಿದ್ಯಾರ್ಥಿಗಳನ್ನು ಎಮ್ಮಿಗನೂರಿನ ಕನಕರಾಜು(19),ಮುರುಡಿ ಗ್ರಾಮದ ಶಂಕರ(18),ನಾಗೇನಹಳ್ಳಿಯ ಹೊನ್ನೂರ(22) ಎಂದು ಗುರುತಿಸಲಾಗಿದೆ.


ನಿನ್ನೆ ಮಧ್ಯರಾತ್ರಿ ರಸ್ತೆ ದಾಟುವ ವೇಳೆ2 ಗಂಟೆ ಸುಮಾರಿನಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಜೇವರ್ಗಿಗೆ ಹೊರಟಿದ್ದ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ದೇಹದ ಕೆಲ ಭಾಗ ನಜ್ಜುಗುಜ್ಜಾಗಿತ್ತು. ಸ್ಥಳಕ್ಕೆ ಬಂದ ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಿದ್ದಾರೆ.

- Advertisement -


ಎಸ್ಸಿ, ಎಸ್ಟಿ ಹಾಸ್ಟಲ್ ನಲ್ಲಿ ಕಲಿಯುತ್ತಿದ್ದ ಬಾಲಕರು 2 ದಿನದ ಹಿಂದೆ ಹಾಸ್ಟಲ್ ಬಿಟ್ಟು ಹೋಗಿದ್ದರು ಎಂದು ತಿಳಿದು ಬಂದಿದೆ.
ಈ ಕುರಿತು ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಗಳು ಮಧ್ಯರಾತ್ರಿ ಹಲಕುಂದಿ ಬಳಿ ಹೋಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Join Whatsapp