KSRTC ಬಸ್- ಆಟೋ ಡಿಕ್ಕಿ, ನವವಿವಾಹಿತ ದಾರುಣ ಸಾವು

Prasthutha|

ಕೋಟ್ಟಯಂ: ಸೇತುವೆಯಿಂದ ರಸ್ತೆಗೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ವಿರುದ್ಧ ದಿಕ್ಕಿನಿಂದ ಬಂದ KSRTC ಬಸ್’ಗೆ ಅಟೋ ಡಿಕ್ಕಿಯಾದ ಪರಿಣಾಮ ನವವಿವಾಹಿತನೋರ್ವ ಮೃತಪಟ್ಟ ಘಟನೆ ಕೇರಳದ ಕೋಟ್ಟಯಂನಲ್ಲಿ ನಡೆದಿದೆ. ಮೃತ ಆಟೋ ಚಾಲಕನನ್ನು ರಂಜಿನ್ ಸೆಬಾಸ್ಟಿಯನ್ (28) ಎಂದು ಗುರುತಿಸಲಾಗಿದೆ.

- Advertisement -

ಸೆಪ್ಟಂಬರ್ 16ರಂದು  ಸೋನಾರೊಂದಿಗೆ ವಿವಾಹವಾಗಿದ್ದ ಕಡುತ್ತುರುತ್ತಿ ನಿವಾಸಿ, ಸೆಬಾಸ್ಟಿಯನ್ ಕೋಟ್ಟಯಂ ನಗರದಲ್ಲಿ ಮಾಂಸ ವಿತರಕನಾಗಿ ಕೆಲಸ ಮಾಡುತ್ತಿದ್ದ. ಭಾನುವಾರ ಪತ್ನಿ ಸೋನಾರ ಸಂಬಂಧಿಕರು ತನ್ನ ಮನೆಗೆ ಬರಲಿದ್ದ ಕಾರಣ ಸೆಬಾಸ್ಟಿಯನ್ ಕೆಲಸಕ್ಕೆ ಹೋಗದಿರಲು ನಿರ್ಧರಿಸಿದ್ದ. ಆದರೆ ಬದಲಿಗೆ ಬೇರೆ ಯಾರೂ ಲಭ್ಯರಾಗದ ಕಾರಣ ಅನಿವಾರ್ಯವಾಗಿ ಕೆಲಸಕ್ಕೆ ತೆರಳಿದ್ದ ರಂಜಿನ್ ಸೆಬಾಸ್ಟಿಯನ್, ಮುಂಜಾನೆ 5.45ಕ್ಕೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.

ನೀಲಮಂಗಲದ ಸೇತುವೆಯಿಂದ ಎಂಸಿ  ರಸ್ತೆಗೆ ಸಂಪರ್ಕಿಸುವ ಸ್ಥಳದಲ್ಲಿ  KSRTC ಬಸ್ ರಂಜಿನ್ ಸೆಬಾಸ್ಟಿಯನ್ ಚಲಾಯಿಸುತ್ತಿದ್ದ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅಟೋ ನುಜ್ಜುಗುಜ್ಜಾಗಿದ್ದು, ಕೋಟ್ಟಯಂ ಅಗ್ನಿಶಾಮಕ ಠಾಣೆಯ ಹಿರಿಯ ಅಧಿಕಾರಿ ಕೆಟಿ ಸಾಲಿ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ ರಂಜಿನ್ ಸೆಬಾಸ್ಟಿಯನ್’ರನ್ನು ಸೇನೆಯ ಆಂಬ್ಯುಲೆನ್ಸ್’ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಾಣ ಉಳಿಯಲಿಲ್ಲ



Join Whatsapp