30ಕ್ಕೂ ಅಧಿಕ ಪ್ರಯಾಣಿಕರಿದ್ದ KSRTC ಬಸ್ ಪಲ್ಟಿ: 7 ಮಂದಿ ಗಂಭೀರ

Prasthutha|

ಬೆಳಗಾವಿ: ಧಾರವಾಡ ದಿಂದ ಜಮಖಂಡಿ ಹೋಗುತ್ತಿದ್ದ ಜಮಖಂಡಿ ಡಿಪೋಗೆ ಸೇರಿದ KSRTC ಬಸ್ ಪಲ್ಟಿ ಆಗಿ 7ಜನ ಪ್ರಯಾಣಿಕರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.

- Advertisement -

ಬೆಳಗಾವಿಯ ರಾಮದುರ್ಗ ತಾಲೂಕಿನ ಮುಳ್ಳೂರ ಘಾಟ್ನಲ್ಲಿ ಬಸ್ ಅಪಘಾತ ಆಗಿದ್ದು, ಅಪಘಾತದಲ್ಲಿ 7 ಜನರಿಗೆ ಗಂಭೀರವಾದ ಗಾಯಗಳಾಗಿದೆ. ಗಾಯಾಳುಗಳನ್ನು ರಾಮದುರ್ಗ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಧಾರವಾಡದಿಂದ ಜಮಖಂಡಿಗೆ ಹೊರಟಿದ್ದ ಬಸ್ ನಲ್ಲಿ 30ಕ್ಕೂ ಅಧಿಕ ಪ್ರಯಾಣಿಕರಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಬಸ್ ರಾಮದುರ್ಗ ತಾಲೂಕಿನ ಮುಳ್ಳೂರು ಘಾಟ್ ನಲ್ಲಿ ಪಲ್ಟಿ ಆಗಿದೆ. ಈ ವೇಳೆ ಪ್ರಾಣಾಪಾಯಕ್ಕೆ ಸಿಲುಕಿದ್ದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.



Join Whatsapp