ನೀತಿ ಸಂಹಿತೆ ಉಲ್ಲಂಘಣೆ: ಈಶ್ವರಪ್ಪ ವಿರುದ್ಧ ಕೇಸ್​ ದಾಖಲು

Prasthutha|

- Advertisement -

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆಎಸ್​​ ಈಶ್ವರಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಜಿಲ್ಲೆಯ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಶಿಕಾರಿಪುರದಲ್ಲಿ ಮಾ.24ರಂದು ನಿಯಮ ಮೀರಿ ಬೈಕ್‌ ರ್‍ಯಾಲಿ ನಡೆಸಿದ್ದರು. 10 ಬೈಕ್‌, ಒಂದು ಜೀಪ್‌ಗೆ ಮಾತ್ರ ಅನುಮತಿ ಪಡೆದಿದ್ದರು. ಆದರೆ ರ್‍ಯಾಲಿಯಲ್ಲಿ 50ಕ್ಕೂ ಹೆಚ್ಚು ಬೈಕ್‌ಗಳು, 4 ಕಾರು ಭಾಗಿ ಹಿನ್ನೆಲೆ ಚುನಾವಣಾಧಿಕಾರಿ ದೂರಿನ ಮೇರೆಗೆ ಈಶ್ವರಪ್ಪ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಬೈಕ್‌ಗಳ ಮೇಲೆ ಓಂ ಬಾವುಟ ಕಟ್ಟಿಕೊಂಡು ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ.



Join Whatsapp