ಹಿಜಾಬ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ: ಕೆ.ಎಸ್. ಮುಹಮ್ಮದ್ ಮಸೂದ್

Prasthutha|

ಮಂಗಳೂರು: ಹಿಜಾಬ್ ವಿಷಯದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ದಕ್ಷಿಣ ಕನ್ನಡ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್ ತಿಳಿಸಿದ್ದಾರೆ. “ಪ್ರಸ್ತುತ” ನ್ಯೂಸ್ ಜತೆ ಮಾತನಾಡಿರುವ ಅವರು, ಹಿಜಾಬ್ ತೀರ್ಪಿನಿಂದ ಬೇಸರ ಉಂಟಾಗಿದೆ, ಹಿಜಾಬ್ ನಮ್ಮ ಹಕ್ಕು, ಆದರೆ ಈ ಕುರಿತು ಎಲ್ಲಾ ವಿದ್ಯಾರ್ಥಿಗಳು ಶಾಂತಿಯನ್ನು ಕಾಪಾಡಬೇಕೆಂದು ವಿನಂತಿಸಿದ್ದಾರೆ.

- Advertisement -

ಹಿಜಾಬ್ ಮುಸ್ಲಿಮರ ಹಕ್ಕು ಅದನ್ನು ವಿದ್ಯಾರ್ಥಿಯರು ಧರಿಸಲಿ, ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಲಿ, ಹಾಕ ಬೇಡಿ ಎಂದು ಯಾರಾದರೂ ಹೇಳಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಸಿಖ್ಖರ ಟರ್ಬನ್ ಧರಿಸಲು ಅವಕಾಶ ನೀಡದಾಗ ಸಿಖ್ಖರು ಬೆದರಿಕೆಯೊಡ್ಡಿದಂತೆ ನಾವು ಬೆದರಿಕೆ ಒಡ್ಡುವುದಿಲ್ಲ, ನಾವು ಹಕ್ಕನ್ನು ಕೇಳುತ್ತೇವೆ ಎಂದು ಹೇಳಿದ್ದಾರೆ.

ಇಂದಿನ ತೀರ್ಪಿನ ವೇಳೆ ಕುರ್ ಆನ್ ನಲ್ಲಿ ಹಿಜಾಬ್ ಅಗತ್ಯವಲ್ಲ ಎಂದಿದೆ ಎಂದು ಹೇಳಲಾಗಿದೆ, ಆದರೆ ಕುರ್ ಆನ್ ಬಗ್ಗೆ ಅವರಿಗೇನು ಗೊತ್ತು ಎಂದು ಕಿಡಿಕಾರಿರುವ ಮಸೂದ್, ಈ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ ಎಂದಿದ್ದಾರೆ.

Join Whatsapp