ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಕಾಲು ಕಳೆದುಕೊಂಡ ನೌಶಾದ್’ಗೆ ಕೊನೆಗೂ ಪರಿಹಾರ ನೀಡಿದ ಕೆ.ಎಸ್.ಹೆಗ್ಡೆ ಆಸ್ಪತ್ರೆ

Prasthutha|

ಮಂಗಳೂರು: ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಕಾಲು ಕಳೆದುಕೊಂಡ ನೌಶಾದ್ ಕುರ್ನಾಡು ಅವರಿಗೆ ಕೊನೆಗೂ ಕೆ ಎಸ್ ಹೆಗಡೆ ಆಸ್ಪತ್ರೆ ಪರಿಹಾರ ನೀಡಿದೆ.
ಇತ್ತೀಚೆಗಷ್ಟೇ ನೌಶಾದ್ ಪರವಾಗಿ ಡಿವೈಎಫ್’ಐ, ಎಸ್ ಡಿಪಿಐ ಸೇರಿದಂತೆ ವಿವಿಧ ಪಕ್ಷ, ಸಂಘಟನೆಗಳ ಸಹಯೋಗದಲ್ಲಿ ದೇರಳಕಟ್ಟೆಯಲ್ಲಿ ಬೃಹತ್ ಹೋರಾಟ ನಡೆದಿತ್ತು. ಹೋರಾಟಕ್ಕೆ ಮಣಿದ ಕೆ.ಎಸ್. ಹೆಗ್ಡೆ ಆಸ್ಪತ್ರೆಯವರು ಒಂದು ವಾರ ಕಾಲಾವಕಾಶವನ್ನು ಕೋರಿದ್ದರು.
ಅದರಂತೆ ಶನಿವಾರ ನೌಶಾದ್ ಕುರ್ನಾಡು ಅವರಿಗೆ ಕೆ.ಎಸ್. ಹೆಗಡೆ ಆಸ್ಪತ್ರೆಯವರು ಪರಿಹಾರವನ್ನು ತಲುಪಿಸಿದ್ದಾರೆ ಎಂದು ತಿಳಿದುಬಂದಿದೆ.
ಕುರ್ನಾಡು ನೌಷಾದ್ ಹೋರಾಟಕ್ಕೆ ಗೆಲುವು
ದೇರಳಕಟ್ಟೆಯಲ್ಲಿ ನಡೆದ ಸಾಮೂಹಿಕ ಧರಣಿಯ ಸಂದರ್ಭ ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆ ನೀಡಿದ ಭರವಸೆಯಂತೆ ನೌಷಾದ್ ಗೆ ಹೊಸ ಬದುಕು ಕಟ್ಟಲು ಸಾಧ್ಯ ಆಗಬಲ್ಲಷ್ಟು ಪರಿಹಾರ ನೀಡಿದೆ. ಸಂತ್ರಸ್ತ ನೌಷಾದ್ ಕುಟುಂಬ ನೀಡಿರುವ ಪರಿಹಾರ ಮೊತ್ತಕ್ಕೆ ಒಪ್ಪಿಗೆ ಸೂಚಿಸಿದೆ. ಸಮಾಧಾನ ವ್ಯಕ್ತಪಡಿಸಿದೆ. ಹೋರಾಟದಲ್ಲಿ ಜೊತೆ ನಿಂತು ಬಲ ತುಂಬಿದ ಸರ್ವ ನಾಗರಿಕರಿಗೂ ಹೃದಯ ತುಂಬಿದ ಧನ್ಯವಾದಗಳು. ಇದು ಜನ ಹೋರಾಟಕ್ಕೆ ಸಂದ ಗೆಲುವು. ಇದೇ ಒಗ್ಗಟ್ಟಿನೊಂದಿಗೆ ಮುನ್ನಡೆಯೋಣ ಎಂದು DYFI ದಕ್ಷಿಣ ಕನ್ನಡ ಹೇಳಿಕೆಯಲ್ಲಿ ತಿಳಿಸಿದೆ.



Join Whatsapp