20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದರೂ ಕುಂಭ ಕರ್ಣ ನಿದ್ರೆಯಲ್ಲಿರುವ ಸರ್ಕಾರ: ಕೃಷ್ಣಬೈರೇಗೌಡ ವಾಗ್ದಾಳಿ

Prasthutha|

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಮೂರು ಪಟ್ಟು ಹೆಚ್ಚು ಮಳೆಯಾಗಿದ್ದು, ಸುಮಾರು 20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಆದರೆ ಸರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ನೀಡಲು ವಿಫಲವಾಗಿದೆ ಎಂದು ಮಾಜಿ ಕೃಷಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಕೃಷ್ಣ ಭೈರೇಗೌಡ ಆರೋಪಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಕೈಗೆ ಬಂದಿರುವ ಬೆಳೆಗಳು ನೆರೆ ಹಾವಳಿಯಿಂದ ಹಾನಿಗೊಳಗಾಗಿವೆ. ರಾಗಿ, ಭತ್ತ, ಜೋಳ, ತೊಗರಿ, ಅಡಿಕೆ, ಕಾಫಿ, ಮೆಣಸು ಬೆಳೆಗಳು ಹಾಳಾಗಿವೆ. ಸರ್ಕಾರದಿಂದ ಬೆಳೆ ನಾಶದ ಬಗ್ಗೆ ಸರಿಯಾದ ಸರ್ವೆಯಾಗಿಲ್ಲ. ಸರ್ಕಾರ ಕುಂಭಕೋಣ ನಿದ್ರೆಯಲ್ಲಿದೆ ಎಂದರು.

ಸರ್ಕಾರ ನೆರೆ ಹಾವಳಿಗೆ 418 ಕೋಟಿ ಬಿಡುಗಡೆ ಮಾಡಿರುವುದಾಗಿ ಸುಳ್ಳು ಹೇಳುತ್ತಿದೆ. ಅಧಿಕಾರಿಗಳು ಹೊಲಕ್ಕೆ ಹೋಗಿ ಸರ್ವೆ ಮಾಡಿಲ್ಲ. ಅಧಿಕಾರಿಗಳು ನೆಲಮಟ್ಟದಲ್ಲಿ ಸಮೀಕ್ಷೆ ಮಾಡಿ ವರದಿ ಕೊಟ್ಟಿಲ್ಲ. ಬೆಳೆಗಳು ಅಲ್ಲದೆ ಮಳೆಗೆ ರಾಜ್ಯದಲ್ಲಿ ಸಾಕಷ್ಟು ಮನೆಗಳು ಬಿದ್ದಿವೆ. ಆದರೆ ಈ ಸರ್ಕಾರ ಕಳೆದ ಬಾರಿ ಮಳೆಯಿಂದ ಬಿದ್ದಿರುವ ಮನೆಗಳಿಗೇ ಇನ್ನೂ ಪರಿಹಾರ ನೀಡಿಲ್ಲ ಎಂದರು.

- Advertisement -

ಬಿಜೆಪಿಯವರಿಗೆ ಆಡಳಿತ ನಡೆಸಲು ಬರುವುದಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರ 2008ರಲ್ಲಿ ಅಧಿಕಾರಕ್ಕಾಗಿ ಕಚ್ಚಾಡಿದ್ದರು. ಸುಭದ್ರ ಸರ್ಕಾರ ಕೊಡಲು ಬಿಜೆಪಿಯಿಂದ ಸಾಧ್ಯವಿಲ್ಲ. ಬಿಜೆಪಿಯವರಿಗೆ ಜನರ ಸಂಕಷ್ಟ ಅವರಿಗೆ ಕಾಣಿಸುವುದಿಲ್ಲ. ಇವರು ಅಧಿಕಾರಕ್ಕೆ ಇಷ್ಟೆಲ್ಲ ಸಮಸ್ಯೆಯಾಗಿದೆ. ಈಗಲೂ ಅಧಿಕಾರಕ್ಕೆ ಲಾಭಿ ಶುರುವಾಗಿದೆ ಎಂದು ಹೇಳಿದರು.



Join Whatsapp