ಮಂಡ್ಯ: ದೇವಾಲಯಗಳನ್ನು ಧಿಕ್ಕರಿಸಿ ಎಂದು ಜಾತಿ ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ BSP ರಾಜ್ಯಾಧ್ಯಕ್ಷರಾದ ಎಂ. ಕೃಷ್ಣಮೂರ್ತಿ ಮನವಿ ಮಾಡಿದ್ದಾರೆ.
ಹನುಮ ಜಯಂತಿ ಪ್ರಯುಕ್ತ ದೇವಾಲಯ ಪ್ರವೇಶಿಸಿದ ದಲಿತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಹರಿಹರಪುರದಲ್ಲಿ ಇತ್ತೀಚೆಗೆ ನಡೆದಿತ್ತು.
ಈ ಸಂಬಂಧ ಸಾಂತ್ವಾನ ಹೇಳಲು ತೆರಳಿದ್ದ ಅವರು, “ದೇವಾಲಯ ಪ್ರವೇಶದ ವಿಚಾರವಾಗಿ ನಿಮ್ಮ ಮೇಲೆ ನಡೆದಿರುವ ಈ ಘಟನೆಗೆ ನೀವು ದೇವಸ್ಥಾನವನ್ನೇ ಧಿಕ್ಕರಿಸುವ ಮೂಲಕ ಉತ್ತರಿಸಬೇಕು” ಎಂದು ಮನವಿ ಮಾಡಿದರು.
“ನಿಮಗೆ ಬಾಬಾ ಸಾಹೇಬರ ಸಂವಿಧಾನವು ಶಿಕ್ಷಣ , ಮೀಸಲಾತಿ , ಉದ್ಯೋಗ , ಸಮಾನತೆ ಮತ್ತು ಮೂಲಭೂತ ಹಕ್ಕುಗಳನ್ನು ನೀಡಿದೆ ಹೊರತು ಯಾವ ದೇವಾಲಯಗಳಾಗಲಿ, ದೇವರಾಗಲಿ ಅಲ್ಲ” ಎಂದು ಅವರು ತಿಳಿಸಿದರು.
ನಾವು ಸ್ವ ಉದ್ಯೋಗದ ಮೂಲಕ ಸ್ವಾಭಿಮಾನ ಮೆರೆದು ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಬೇಕು. ಸವರ್ಣೀಯರು ಯಾವುದೇ ಬದಲಾವಣೆಯನ್ನು ಬಯಸುವುದಿಲ್ಲ. ಹಾಗಾಗಿ ನಾವೇ ಮೊದಲು ಬದಲಾಗಬೇಕು. ಸಂತ್ರಸ್ತರಿಗೆ ಕಾನೂನಾತ್ಮಕ ನ್ಯಾಯ ಒದಗಿಸುವುದಾಗಿ ಶ್ರೀನಿವಾಸ್ ಭರವಸೆ ನೀಡಿದರು.