ಕಾರ್ಕಳ ಪರಶುರಾಮನ ವಿಗ್ರಹ ನಿರ್ಮಾಣದಲ್ಲಿ ವಂಚನೆ: ಶಿಲ್ಪಿ ಕೃಷ್ಣ ನಾಯ್ಕ್ 7 ದಿನ ಪೊಲೀಸ್ ಕಸ್ಟಡಿಗೆ

Prasthutha|

ಉಡುಪಿ: ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರ ಪ್ರಕರಣದಲ್ಲಿ ನಕಲಿ ಕಂಚಿನ ಮೂರ್ತಿ ನಿರ್ಮಿಸಿದ ಶಿಲ್ಪಿ ಕೃಷ್ಣ ನಾಯ್ಕ್ ಅವರನ್ನು ಬಂಧಿಸಲಾಗಿದೆ.

- Advertisement -


ಆರೋಪಿ ಕೃಷ್ಣ ನಾಯ್ಕ್ ಕಾರ್ಕಳ ಜೆಎಂಎಫ್ಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು. ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.


ಕ್ರಿಶ್ ಆರ್ಟ್ ವರ್ಲ್ಡ್ ನ ಕೃಷ್ಣ ನಾಯ್ಕ್ ಗೆ ಮೂರ್ತಿ ನಿರ್ಮಾಣದ ಹೊಣೆ ಹೊರಿಸಲಾಗಿತ್ತು. ನಕಲಿ ಮೂರ್ತಿ ನಿರ್ಮಾಣ ಆರೋಪದಲ್ಲಿ ನಲ್ಲೂರಿನ ಕೃಷ್ಣ ಶೆಟ್ಟಿ ದೂರಿನ ಅನ್ವಯ ಆರೋಪಿಯನ್ನು ವಶಕ್ಕೆ ಪಡೆಯಲಾಗಿತ್ತು.

- Advertisement -


ಜಾಮೀನಿಗಾಗಿ ಕೋರ್ಟ್ ಗೆ ಶಿಲ್ಪಿ ಕೃಷ್ಣ ನಾಯ್ಕ್ ಅರ್ಜಿ ಸಲ್ಲಿಸಿದ್ದರು. ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.



Join Whatsapp