ಕೆಪಿಸಿಸಿ ಅಧ್ಯಕ್ಷರು ಬದಲಾಗಲಿ: ಸಚಿವ ಕೆಎನ್ ರಾಜಣ್ಣ

Prasthutha|

ಬೆಂಗಳೂರು: ಲೋಕಸಭೆ ಚುನಾವಣೆ ಆಗುವ ತನಕ ಮಾತ್ರ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಇರುತ್ತಾರೆ ಎಂದು ಹೈಕಮಾಂಡ್ ನಾಯಕರು ಹೇಳಿದ್ದರು. ಚುನಾವಣೆ ಮುಗಿದಿರುವ ಹಿನ್ನೆಲೆಯಲ್ಲಿ ಅದನ್ನು ನೆನಪು ಮಾಡಿಕೊಡಲು ಇಷ್ಟಪಡುತ್ತೇನೆ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಲ್ಲ ಸಮುದಾಯದವರೂ ಅಧ್ಯಕ್ಷರಾಗಲು ಅರ್ಹರು. ಲಿಂಗಾಯತ ನಾಯಕರು ಅಧ್ಯಕ್ಷ ಸ್ಥಾನ ಕೇಳುತ್ತಿರುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ.

ಡಿಸಿಎಂ ಹುದ್ದೆ ಕೇಳಿದ್ದು ತಪ್ಪೇನಿಲ್ಲ ಎಂದು ಇದೇ ಸಂದರ್ಭ ಹೇಳಿದ ಸಚಿವರು, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವಾಗ ಹೈಕಮಾಂಡ್ ಏನು ಹೇಳಿತ್ತು? ಹೇಳಿ?
ಡಿಸಿಎಂ ಹುದ್ದೆಗಳನ್ನು ಕೇಳುವುದರಲ್ಲಿ ತಪ್ಪೇನಿದೆ? ಈಗಲೂ ಈ ಬಗ್ಗೆ ನನ್ನ ನಿಲುವಿಗೆ ಬದ್ದನಿದ್ದೇನೆ. ಹೆಚ್ಚುವರಿ ಡಿಸಿಎಂ ವಿಚಾರದಲ್ಲಿ ಶಿವಗಂಗಾ ಬಸವರಾಜ, ಬಾಲಕೃಷ್ಣ ಹೇಳಿಕೆಗಳಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ.

- Advertisement -

ಡಿ ಕೆ ಶಿವಕುಮಾರ್ ಅವರು ಸಿಎಂ ಹುದ್ದೆ ಕೇಳುವುದು ತಪ್ಪಲ್ಲ ಎಂದ ರಾಜಣ್ಣ, ಯಾರು ಏನೇ ಹೇಳಿದರೂ ಕೂಡ ತೀರ್ಮಾನ ಮಾಡುವುದು ಹೈಕಮಾಂಡ್. ಹೆಚ್ಚುವರಿ ಡಿಸಿಎಂ ಬಗ್ಗೆ ನಾನು ಹಿಂದೆಯೂ ಒತ್ತಾಯ ಮಾಡಿದ್ದೆ. ಈಗಲೂ ಮಾಡ್ತೇನೆ, ಮುಂದೆಯೂ ಮಾಡ್ತೇನೆ. ಅದರಲ್ಲಿ ವಾಪಸ್ ಹೋಗುವುದೇನೂ ಇಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದ್ದು ಹೈಕಮಾಂಡ್ ತಾನೇ? ಈ ಬಗ್ಗೆಯೂ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದಿದ್ದಾರೆ.

Join Whatsapp