ನಾಲ್ಕನೇ ಬಾರಿಗೆ ನೇಪಾಳದ ಪ್ರಧಾನಿಯಾದ ಕೆ.ಪಿ ಶರ್ಮಾ ಓಲಿ

Prasthutha|

ಕಠ್ಮಂಡು: ಸಿಪಿಎನ್‌-ಯುಎಮ್‌ಎಲ್ ಪಕ್ಷದ ಅಧ್ಯಕ್ಷ ಕೆ.ಪಿ ಶರ್ಮಾ ಓಲಿ (72) ನೇಪಾಳದ ಪ್ರಧಾನಿಯಾಗಿ ನೇಮಕವಾಗಿದ್ದಾರೆ. ನಾಲ್ಕನೇ ಬಾರಿಗೆ ಅವರು ‍ಪ್ರಧಾನಿಯಾಗಿದ್ದಾರೆ. ಓಲಿ ಅವರ ಪದಗ್ರಹಣ ಸಮಾರಂಭವು ಸೋಮವಾರ ಬೆಳಿಗ್ಗೆ 11 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ.

- Advertisement -

ಸಂಸತ್‌ನಲ್ಲಿ ಅತಿ ದೊಡ್ಡ ಪಕ್ಷವಾಗಿರುವ ನೇಪಾಳಿ ಕಾಂಗ್ರೆಸ್ ಬೆಂಬಲದೊಂದಿಗೆ ಅವರು ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಓಲಿ ಅವರನ್ನು ನೂತನ ಪ್ರಧಾನಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ರಾಮ್ ಚಂದ್ರ ಪೌಡೆಲ್ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

ಶುಕ್ರವಾರ ನಡೆದ ವಿಶ್ವಾಸಮತ ಯಾಚನೆಯಲ್ಲಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು, ಬಹುಮತ ಸಾಬೀತು ಪಡಿಸಲು ವಿಫಲರಾಗಿ, ‍‍ಪ್ರಧಾನಿ ಪಟ್ಟ ಕಳೆದುಕೊಂಡಿದ್ದರು.

ಈ ಹಿಂದೆ ಓಲಿಯವರು, 2015ರ ಅಕ್ಟೋಬರ್ 11 ರಿಂದ 2016ರ ಆಗಸ್ಟ್ 3, 2018 ಫೆಬ್ರವರಿ 5 ರಿಂದ 2021 ಜುಲೈ 13ರವರೆಗೆ ಹಾಗೂ 2021 ಮೇ 13 ರಿಂದ 2021 ಜುಲೈ 13ರ ವರೆಗೆ ಪ್ರಧಾನಿಯಾಗಿದ್ದರು.



Join Whatsapp