ಅ.28 ರಂದು ಕೊಳ್ಳೇಗಾಲ ನಗರ ಸಭೆ ಉಪ ಚುನಾವಣೆ: ಬಿಎಸ್ಪಿ ಜೊತೆ ಎಸ್ ಡಿಪಿಐ ಮೈತ್ರಿ

Prasthutha|

ಮೈಸೂರು: ಅ.28 ರಂದು ನಡೆಯುವ ಕೊಳ್ಳೆಗಾಲ ನಗರ ಸಭೆ ಉಪಚುನಾವಣೆಯಲ್ಲಿ ಬಿಎಸ್ಪಿ ಮತ್ತು ಎಸ್ಡಿಪಿಐ ಮೈತ್ರಿ ಮಾಡಿಕೊಂಡಿವೆ. ವಾರ್ಡ್ ಗಳನ್ನು ಹಂಚಿಕೆ ಮಾಡಿಕೊಂಡ ಎರಡು ಪಕ್ಷಗಳು ಒಟ್ಟಾಗಿ ಬಿಜೆಪಿಯನ್ನು ಮಟ್ಟ ಹಾಕುವುದೇ ನಮ್ಮ ಗುರಿ ಎಂದು ಹೇಳಿವೆ.

- Advertisement -

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಬಿಎಸ್ಪಿ ಕೊಳ್ಳೇಗಾಲ ಕ್ಷೇತ್ರದ ಅಧ್ಯಕ್ಷ ಬಾಳಗುಣಸೆ ಮಂಜುನಾಥ್, ನಮ್ಮ ಪಕ್ಷ ಮತ್ತು ಎಸ್ಡಿಪಿಐ ಈ ಉಪಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಎರಡನೇ ವಾರ್ಡನ್ನು ಎಸ್ಡಿಪಿಐ ಗೆ ಬಿಟ್ಟುಕೊಟ್ಟು ಇನ್ನುಳಿದ 6 ವಾರ್ಡುಗಳಲ್ಲಿ ಬಿಎಸ್ಪಿ ಸ್ಪರ್ಧೆ ನಡೆಸಲಿದೆ ಎಂದು ಹೇಳಿದರು. ಬಿಜೆಪಿಯವರ ಕುತಂತ್ರದಿಂದ ನಗರಸಭೆಯಲ್ಲಿ ಚುಕ್ಕಾಣಿ ಹಿಡಿದಿದ್ದ ಬಿಎಸ್ಪಿ ಅಧಿಕಾರ ಕಳೆದುಕೊಳ್ಳುವಂತಾಯ್ತು. ಆದ್ದರಿಂದ ಈ ಬಾರಿ ಎರಡೂ ಪಕ್ಷಗಳು ಒಟ್ಟಾಗಿ ಕಣಕ್ಕಿಳಿಯಲಿವೆ. ಬಿಜೆಪಿಯನ್ನು ಸೋಲಿಸಿ ಒಟ್ಟು 7 ವಾರ್ಡುಗಳಲ್ಲೂ ಜಯಗಳಿಸುವ ವಿಶ್ವಾಸ ನಮಗಿದೆ ಎಂದು ಮಂಜುನಾಥ್ ಹೇಳಿದರು.

ಪ್ರತಿಕಾಗೋಷ್ಠಿಯಲ್ಲಿ ಹಾಜರಿದ್ದ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಮತ್ತು ಚಾ.ನಗರ ನಗರಸಭೆ ಸದಸ್ಯ ಮಹೇಶ್ ಮಾತನಾಡಿ, ಚಾ. ನನಗರ ಸಭೆಯಲ್ಲಿ 6 ವಾರ್ಡುಗಳಲ್ಲಿ ನಮ್ಮ ಪಕ್ಷ ಗೆದ್ದಿದ್ದು, ಸಾರ್ವನಿಕರಿಗೆ ಬೇಕಾದಂತಹ ಎಲ್ಲಾ ಮೂಲ ಸೌಕರ್ಯಗಳನ್ನು ನಾವು ಒದಗಿಸಿ ಕೊಟ್ಟಿದ್ದೇವೆ. ಇದೀಗ ಕೊಳ್ಳೇಗಾಲದ ಉಪಚುನಾವಣೆಯ ಎರಡನೇ ವಾರ್ಡಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದು ಇನ್ನುಳಿದ 6 ಕಡೆ ಬಿಎಸ್ಪಿಯನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.

- Advertisement -

ಪತ್ರಿಕಾಗೋಷ್ಠಿಯಲ್ಲಿ ಟೌನ್ ಅಧ್ಯಕ್ಷ ಇನಾಯತ್ ಪಾಷ, ಹಿರಿಯ ಮುಖಂಡ ಮಣಿ, ಕೊಳ್ಳೇಗಾಲ ತಾಲೂಕಿನ ಜಾಕೀರ್ ಪಾಷ ,ಯಳಂದೂರು ಬ್ಲಾಕ್ ಅಧ್ಯಕ್ಷ ನಾಗೇಂದ್ರ, ಜಿಲ್ಲಾ ಕಾರ್ಯದರ್ಶಿ ಖಲೀಲ್ ಹಾಜರಿದ್ದರು



Join Whatsapp