►ಅಟಾಪ್ಸಿ ವರದಿಯಲ್ಲೇನಿದೆ?
ಕೋಲ್ಕತ್ತಾ: ಆರ್ ಜಿ ಕರ್ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಇನ್ನಷ್ಟು ಗೊಂದಲದ ವಿವರಗಳು ಹೊರಬಿದ್ದಿವೆ.
ಅವರ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಸಂಜೋಯ್ ರಾಯ್ ಆಕೆಯ ಕನ್ನಡಕ ಒಡೆದು ಹೋಗುವ ಹಾಗೆ ಹೊಡೆದಿದ್ದರಿಂದ ಕನ್ನಡಕದ ಚೂರುಗಳು ಕಣ್ಣುಗಳಿಗೆ ಚುಚ್ಚಿದ್ದವು ಎಂಬುದನ್ನು ಮರಣೋತ್ತರ ವರದಿ ತಿಳಿಸಿದೆ.
ಪ್ರಾಥಮಿಕ ಶವ ಪರೀಕ್ಷೆ ವರದಿಯು ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ನಂತರ ಕೊಲೆ ಮಾಡಲಾಗಿದೆ ಎಂಬುದನ್ನು ಸೂಚಿಸಿದ್ದು, ಆತ್ಮಹತ್ಯೆ ಎಂಬುದನ್ನು ತಳ್ಳಿಹಾಕಿದೆ.
ವರದಿಯಲ್ಲಿ ಆಕೆಯ ಕಣ್ಣು ಹಾಗೂ ಬಾಯಿಯಿಂದ ರಕ್ತಸ್ರಾವವಾಗಿದ್ದು, ಮುಖದ ಮೇಲೂ ಗಾಯಗಳಾಗಿದ್ದವು, ಸಂತ್ರಸ್ತೆಯ ಖಾಸಗಿ ಭಾಗಗಳಲ್ಲೂ ರಕ್ತಸ್ರಾವವಾಗಿತ್ತು, ಹೊಟ್ಟೆ, ಎಡಗಾಲು, ಉಂಗುರದ ಬೆರಳು ಮತ್ತು ತುಟಿಗಳಲ್ಲಿ ಗಾಯಗಳಾಗಿದ್ದವು.
ಶುಕ್ರವಾರ ಬೆಳಗ್ಗೆ ಪಶ್ಚಿಮ ಬಂಗಾಳದ ಸರ್ಕಾರಿ ಸ್ವಾಮ್ಯದ ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಶವ ಪತ್ತೆಯಾಗಿತ್ತು. ಆಸ್ಪತ್ರೆ ಆವರಣಕ್ಕೆ ಆಗಾಗ ಬರುತ್ತಿದ್ದ ಸಂಜಯ್ ರಾಯ್ ಎಂಬಾತನನ್ನು ಶನಿವಾರ ಬಂಧಿಸಲಾಗಿದೆ.