ಕೋಲ್ಕತ್ತಾ: 150 ವರ್ಷಗಳ ಇತಿಹಾಸವಿರುವ ಟ್ರಾಮ್ ರೈಲು ಸಂಚಾರ ಸ್ಥಗಿತ

Prasthutha|

ಕೋಲ್ಕತ್ತಾ: ಕೋಲ್ಕತ್ತಾ ನಗರದ ಪುರಾತನ ಸಾರಿಗೆ ಟ್ರಾಂ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.

- Advertisement -


ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಸಾರಿಗೆ ಸಚಿವ ಸ್ನೇಹಾಸಿಸ್ ಚಕ್ರವರ್ತಿ, “ಪ್ರಯಾಣಿಕರಿಗೆ ವೇಗದ ಸಾರಿಗೆಯ ಅಗತ್ಯವಿದ್ದು, ಟ್ರಾಮ್ ರೈಲುಗಳು ನಿಧಾನಗತಿಯಲ್ಲಿ ಸಂಚರಿಸುವುದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆಯುಂಟಾಗುತ್ತಿದೆ” ಎಂದು ಹೇಳಿದ್ದಾರೆ.


1873ರ ಫೆಬ್ರುವರಿ 24ರಂದು ಈ ಟ್ರಾಂ ರೈಲುಗಳು ರಸ್ತೆಗಳಿದಿದ್ದವು. ಸಾಮಾನ್ಯ ರಸ್ತೆಗಳ ಮೇಲೆಯೇ ಈ ರೈಲುಗಳಿಗೆ ಹಳಿಗಳನ್ನು ನಿರ್ಮಿಸಲಾಗುತ್ತದೆ. ಹಳಿಗಳ ಮೇಲೆ ಇತರ ವಾಹನಗಳೂ ಸಂಚರಿಸಬಹುದು. ಆರಂಭದಲ್ಲಿ ಕುದುರೆಗಳ ಸಹಾಯದಿಂದ ರೈಲುಗಳನ್ನು ಚಲಿಸುತ್ತಿದ್ದವು. ಬಳಿಕ ಆಧುನೀಕರಣಗೊಂಡು 1900ರಲ್ಲಿ ಮೊದಲ ವಿದ್ಯುತ್ ಚಾಲಿತ ಟ್ರಾಂ ರೈಲು ಆರಂಭವಾಯಿತು. ಒಂದು ಶತಮಾನಗಳ ಕಾಲ ಚಲಿಸಿದ ಈ ರೈಲುಗಳಿಗೆ 2013ರಲ್ಲಿ ಎಸಿಯನ್ನು ಪರಿಚಯಿಸಲಾಯಿತು.

- Advertisement -


ಕೋಲ್ಕತ್ತಾದಲ್ಲಿ ಟ್ರಾಂ ಸಂಚಾರವನ್ನು ಸ್ಥಗಿತಗೊಳಿಸದಿರುವಂತೆ ಹಲವು ಸಂಘಗಳು ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ ಟ್ಯಾಗ್ ಅಭಿಯಾನವನ್ನು ಪ್ರಾರಂಭಿಸಿದೆ. ‘ಟ್ರಾಮ್ ಗಳನ್ನು ಉಳಿಸಲು ನಾವು ಈ ವಾರದೊಳಗೆ ಚಳುವಳಿಯನ್ನು ಪ್ರಾರಂಭಿಸುತ್ತೇವೆ’ ಎಂದು ಕೋಲ್ಕತ್ತ ಟ್ರಾಂ ಬಳಕೆದಾರರ ಸಂಘ ತಿಳಿಸಿದೆ.



Join Whatsapp