ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಕೋಲಾರದ ಕೆ.ಪಿ. ಅಶ್ವಿನಿ ನೇಮಕ: ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕದಿಂದ ಅಭಿನಂದನೆ

Prasthutha|

ಬೆಂಗಳೂರು: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ನೇಮಕವಾಗಿರುವ ನಾಡಿನ ಹೆಮ್ಮೆಯ ಪುತ್ರಿ ಕೋಲಾರದ ಪ್ರೊಫೆಸರ್ ಕೆ.ಪಿ. ಅಶ್ವಿನಿಗೆ ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ಅಭಿನಂದನೆ ಸಲ್ಲಿಸಿದೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿರುವ ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ , ಸರಕಾರವು ತನ್ನೆಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿ ಜಾತಿತಾರತಮ್ಯ ಮತ್ತು ಜನಾಂಗೀಯ ದ್ವೇಷವನ್ನು ಬಿತ್ತಿ ಬೆಳೆಸುತ್ತಿರುವ ಭಾರತೀಯ ಸನ್ನಿವೇಶದಲ್ಲಿ ಅಶ್ವಿನಿ ಕೆ. ಪಿ ಯವರ ಈ ನೇಮಕಾತಿಯು ಆಶಾಭಾವನೆಯನ್ನು ಮೂಡಿಸಿದೆ ಎಂದು ಹೇಳಿದೆ.

ಜಿನೋ ಸೈಡ್ ವಾಚ್ ಎಂಬ ಅಂತರಾಷ್ಟ್ರೀಯ ಸಂಸ್ಥೆಯು ಈಗಾಗಲೇ ಭಾರತವು ಜನಾಂಗೀಯ ನರ ಮೇದದ ಕೊನೆಯ ಹಂತದಲ್ಲಿದೆ ಎಂಬ ಎಚ್ಚರಿಕೆ ನೀಡಿರುವಾಗ ತಮ್ಮ ನೇಮಕಾತಿಯು ಅತ್ಯಂತ ಹೆಚ್ಚು ಪ್ರಸ್ತುತವೆನಿಸುತ್ತದೆ. ಮಾನವ ಹಕ್ಕು ಉಲ್ಲಂಘನೆ ಭಾರತದಲ್ಲಿ ನಡೆಯುತ್ತಿದ್ದು ಸರಕಾರಿ ಬೇರಹುಗಾರಿಕೆಯಿಂದಾಗಿ ಆಮ್ನೆಸ್ಟಿ ಇಂಟರ್  ನ್ಯಾಷನಲ್ ತನ್ನ ಭಾರತೀಯ ಸಂಸ್ಥೆಯನ್ನು ಮುಚ್ಚಿರುವುದು ವಿಷಾದನೀಯ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಹೇಳಿದ್ದಾರೆ.

- Advertisement -

ನಸ್ರಿಯಾ ಬೆಳ್ಳಾರೆ ಅವರು, ಮಹಿಳಾ ಬದ್ರತೆ ಮತ್ತು ಮಹಿಳಾ ಹಕ್ಕುಗಳ ಸಂರಕ್ಷಣೆ ಸರಕಾರದ ಆದ್ಯತೆಯಾಗಿ ಈಗ ಉಳಿದಿಲ್ಲ. ಅಂತೆಯೇ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗದ ಜನರು ದಿನದಿಂದ ದಿನಕ್ಕೆ ಅಭದ್ರತೆಯನ್ನು ಅನುಭವಿಸುತ್ತಿದ್ದಾರೆ. ತಮ್ಮ ತವರು ದೇಶದ ಋಣಾತ್ಮಕತೆಯನ್ನು ವಿಶ್ವಸಂಸ್ಥೆಯ ಮುಂದಿಟ್ಟು ಪರಿಣಾಮಕಾರಿ ಬದಲಾವಣೆಯನ್ನು ತರಲು ತಮ್ಮ ಅಧಿಕಾರ ಅವಧಿಯಲ್ಲಿ ಸಾಧ್ಯವಾಗಲಿ.  ಜಾತಿ ಜನಾಂಗೀಯ ತಾರತಮ್ಯ ಸಂಪೂರ್ಣ ನಿರ್ಮೂಲಗೊಂಡು ಮಾನವ ಹಕ್ಕುಗಳು ನಿಜಾರ್ಥದಲ್ಲಿ ಸಾಕಾರಗೊಳ್ಳಲು ಸಾಧ್ಯವಾಗಲಿ ಎಂದು ಹಾರೈಸಿದ್ದಾರೆ. 

ತಮ್ಮ ಜವಾಬ್ದಾರಿಯ ಸೂಕ್ತ  ನಿರ್ವಹಣೆಯು ಮುಂದಿನ ಯಶಸ್ಸಿಗೆ ಮೆಟ್ಟಿಲಾಗಿ ಪರಿವರ್ತನೆ ಯಾಗಲಿ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ಹಾರೈಸುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



Join Whatsapp