ದುಬೈ; ಐಸಿಸಿ T-20 ವಿಶ್ವಕಪ್ನ ಸಾಂಪ್ರದಾಯಿಕ ಎದುರಾಳಿಗಳ ಕದನದಲ್ಲಿ ಪಾಕಿಸ್ತಾನ ಗೆಲುವಿಗೆ ಟೀಮ್ ಇಂಡಿಯಾ 152 ರನ್’ಗಳ ಸವಾಲಿನ ಗುರಿ ನಿಗದಿಪಡಿಸಿದೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ, ಕೊಹ್ಲಿ ಬಳಗವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿತ್ತು.
ಆರಂಭದಲ್ಲಿ ಎಡವಿದರೂ ಬಳಿಕ ಚೇತರಿಕೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತದ ಬ್ಯಾಟರ್’ಗಳು ನಿಗದಿತ 20 ಓವರ್ಗಳಲ್ಲಿ 7 ವಿಕೆ ಟ್ ನಷ್ಟ ದ ಲ್ಲಿ 151 ರನ್ ಒಟ್ಟುಗೂಡಿಸಿದರು.
ನಾಯಕ ಬಾಬರ್ ಅಝಮ್ ನಿರ್ಧಾರವನ್ನು ಸಮರ್ಥಿಸುವ ರೀತಿಯಲ್ಲಿ ಪಾಕ್ ಬೌಲರ್ಗಳು ಆರಂಭದಲ್ಲೇ ಆರಂಭದಲ್ಲಿ ಬಿಗು ಬೌಲಿಂಗ್ ದಾಳಿ ಸಂಘಟಿಸಿದರು.
ತಾನು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ ರೋಹಿತ್ ಶರ್ಮಾ ಶೂನ್ಯಕ್ಕೆ ಮರಳಿದರೆ, ಕೆ.ಎಲ್.ರಾಹುಲ್ ಮೂರು ರನ್’ಗಳಿಸಿ ಕ್ಲೀನ್ ಬೌಲ್ಡ್ ಆದರು.
ಇವರಿಬ್ಬರ ವಿಕೆಟ್ ಎಡಗೈ ವೇಗಿ ಶಾಹಿನ್ ಅಫ್ರೀದಿ ಪಾಲಾಯಿತು.
ಸೂರ್ಯಕುಮಾರ್ ಯಾದವ್ ಕೂಡ ಹೆಚ್ಚು ಹೊತ್ತು ಕ್ರೀಸ್’ನಲ್ಲಿ ನಿಲ್ಲಲಿಲ್ಲ.
ಆದರೆ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಎಚ್ಚರಿಕೆಯ ಜೊತೆಯಾಟವಾಡಿ ತಂಡದ ಮೊತ್ತವನ್ನು ನಿಧಾನವಾಗಿ ಹೆಚ್ಚಿಸಿದರು.
49 ಎಸೆತಗಳನ್ನು ಎದುರಿಸಿದ ಕ್ಯಾಪ್ಟನ್ ಕೊಹ್ಲಿ 1 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 57 ರನ್ ಗಳಿಸಿ ಶಾಹಿನ್ ಅಫ್ರೀದಿಗೆ ವಿಕೆಟ್ ಒಪ್ಪಿಸಿದರು. ರಿಷಭ್ ಪಂತ್ 39 ರನ್’ಗಳಿಸಿದರು.
ಪಾಕಿಸ್ತಾನದ ಪರ ಶಾಹಿನ್ ಅಫ್ರೀದಿ 3 ಹಾಗೂ ಹಸ್ಸನ್ ಅಲಿ 2 ವಿಕೆಟ್ ಪಡೆದು ಮಿಂಚಿದರು.