ಮಡಿಕೇರಿ: ಮುಂದಿನ ಬಜೆಟ್ ನಲ್ಲಿ ಕೊಡವ ಜನಾಂಗದ ಶ್ರೇಯೋಭಿವೃದ್ಧಿಗೆ ” ಕೊಡವ ಅಭಿವೃದ್ಧಿ ಮಂಡಳಿ”ಯನ್ನು ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಯುನೈಟೆಡ್ ಕೊಡವ ಆರ್ಗನೈಶೈಶನ್ (ಯುಕೊ) ಸಂಘಟನೆ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದ ನಿಯೋಗ ಇಂದು ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಮುಂದಿನ ಬಜೆಟ್ನಲ್ಲಿ ಕೊಡವ ಅಭಿವೃದ್ಧಿ ಮಂಡಳಿ ಘೋಷಣೆ ಮಾಡಲಾಗುವುದು ಎಂದು ಹೇಳಿದರು.
ಕೊಡಗಿನ ಶಾಸಕರಾದ ಕೆ.ಜಿ.ಬೋಪಯ್ಯ,ಅಪ್ಪಚ್ಚು ರಂಜನ್, ವೀಣಾ ಅಚ್ಚಯ್ಯ ಅವರ ಮೂಲಕ ಬೆಳಗಾವಿ ಯಲ್ಲಿ ಮುಖ್ಯಮಂತ್ರಿ ಭೇಟಿ ಮಾಡಿದರು. ಇದೇ ವೇಳೆ ಕೊಡವ ಜನಾಂಗದ ಬಗ್ಗೆ ಹಾಗೂ ಕೊಡವ ಸಂಸ್ಕೃತಿ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಯಿತ್ತು. ನಂತರ ಸಿಎಂ ಬೊಮ್ಮಾಯಿ ಕೊಡವ ಅಭಿವೃದ್ಧಿ ಮಂಡಳಿ ರಚನೆಗೆ ಒಪ್ಪಿಗೆ ನೀಡಿದರು.