ಖೇಲೋ ಇಂಡಿಯಾ ಯೂತ್ ಗೇಮ್ಸ್’ನಲ್ಲಿ ಚಿನ್ನ ಗೆದ್ದ ಕೊಡಗಿನ ಕುವರಿ ಉನ್ನತಿ ಅಯ್ಯಪ್ಪ

Prasthutha|

ಕೊಡಗು: ಪಂಜಬ್ ನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ ಬಾಲಕಿಯರ ವಿಭಾಗದ 100 ಮೀಟರ್ ಹರ್ಡಲ್ಸ್ ನಲ್ಲಿ ಕರ್ನಾಟಕದ ಉನ್ನತಿ ಅಯ್ಯಪ್ಪ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. 14.00 ಸೆಕೆಂಡ್‌ನಲ್ಲಿ ಗುರಿ ಮುಟ್ಟುವ ಮೂಲಕ ಕೊಡಗಿನ ಕುವರಿ ಉನ್ನತಿ ಅಯ್ಯಪ್ಪ ಚಿನ್ನದ ಪದಕವನ್ನು ಗೆದ್ದುಕೊಂಡರು.

- Advertisement -

ಇನ್ನೂ ಉನ್ನತಿ ಅಯ್ಯಪ್ಪ ಅವರ ಪೋಷಕರು ಕೂಡ ಅಥ್ಲೆಟ್ಸ್ ನಲ್ಲಿ ತೊಡಗಿಸಿಕೊಂಡವರು. ಸದ್ಯ ವೃತ್ತಿಪರ ಅಥ್ಲೆಟಿಕ್ಸ್ ತರಬೇತುದಾರರಾಗಿರುವ ತಾಯಿ ಪ್ರಮೀಳಾ ಮಗಳು ಚಿನ್ನದ ಪದಕವನ್ನು ಗೆದ್ದ ಕ್ಷಣವನ್ನು ನೋಡುತ್ತಾ ಭಾವಪರವಶರಾದರು.

ಪೋಷಕರು ಅಥ್ಲೆಟಿಕ್ಸ್ಗೆ ಅರ್ಪಿಸಿಕೊಂಡರೂ ಕೂಡ , ಉನ್ನತಿ ಬ್ಯಾಡ್ಮಿಂಟನ್ ಅಥವಾ ಈಜು ವೃತ್ತಿಯನ್ನು ಮುಂದುವರಿಸಲು ಬಯಸಿದ್ದರು. ಈ ಕುರಿತು ಮಾತನಾಡಿದ ಉನ್ನತಿ “ನಾನು ಬಹಳಷ್ಟು ಕ್ರೀಡೆಗಳನ್ನು ಪ್ರಯತ್ನಿಸಿದೆ. ಆದರೆ ಯಾವುದನ್ನೂ ಇಷ್ಟಪಡಲಿಲ್ಲ. ಅಥ್ಲೆಟಿಕ್ಸ್ನಲ್ಲಿಯೂ ಸಹ ನಾನು ಹರ್ಡಲ್ಸ್ನಲ್ಲಿ ಉತ್ತಮವಾಗಿ ಆಡುವ ಮೊದಲು ಲಾಂಗ್ ಜಂಪ್ನಲ್ಲಿ ಚಾಂಪಿಯನ್ ಆಗಿದ್ದೆ” ಎಂದು ಉನ್ನತಿ ಹೇಳಿದರು.

- Advertisement -

ಇನ್ನೂ ಇದೇ ಸಂದರ್ಭದಲ್ಲಿ ತಾಯಿ ಪ್ರಮೀಳಾ ಮಾತನಾಡಿ, “ನಾವು ಅವಳ ಮೇಲೆ ಒತ್ತಡ ಹೇರಲು ಬಯಸುವುದಿಲ್ಲಿ ಮತ್ತು ಅವಳು ಸ್ವಾಭಾವಿಕವಾಗಿ ಪ್ರಗತಿ ಹೊಂದುತ್ತಾಳೆ ಎಂದು ಭಾವಿಸುತ್ತೇವೆ” ಎಂದು ಹೇಳಿದರು. “ಇದು ಖೇಲೋ ಇಂಡಿಯಾ ಗೇಮ್ಸ್ನಲ್ಲಿ ಅವಳ ಇದೇ ಮೊದಲು ಪ್ರವೇಶ ಪಡೆದಿದ್ದು, KIYG ನಲ್ಲಿ ಪದಕ ಗೆಲ್ಲುವುದು ಅವಳ ದೊಡ್ಡ ಕನಸಾಗಿತ್ತು. ಸದ್ಯ ಉನ್ನತಿ ಕನಸನ್ನು ನನಸಾಗಿಸಿಕೊಂಡಿದ್ದಾಳೆ. ಇ ಕ್ಷಣವನ್ನು ನೋಡಿ ನಾನು ರೋಮಾಂಚನಗೊಂಡಿದ್ದೇನೆ” ಎಂದು ಪ್ರಮೀಳಾ ಹೇಳಿದರು.
ಉನ್ನತಿ ಮಂಗಳೂರಿನ ಆಳ್ವಾಸ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಬೆಂಗಳೂರಿನ ಶ್ರೀಕಂಠೀರವ ಸ್ಟೇಡಿಯಂನಲ್ಲಿ ತರಬೇತಿ ಪಡೆಯುತ್ತಿದ್ದಾರೆ.



Join Whatsapp