ಕೊಡಗು ಜಿಲ್ಲೆಯಲ್ಲಿ ಬೃಹತ್ ಮೀಲಾದ್ ಸಂದೇಶ ಜಾಥಾ

Prasthutha|

ವಿರಾಜಪೇಟೆ: ಪೈಗಂಬರ್ ಮುಹಮ್ಮದ್ ರವರ ಜನ್ಮದಿನದ ಅಂಗವಾಗಿ ವಿರಾಜಪೇಟೆಯ ಅನ್ವಾರುಲ್ ಹುದಾ ಸೆಂಟರ್ ನೇತೃತ್ವದಲ್ಲಿ ಎಸ್.ಎಸ್.ಎಫ್, ಎಸ್.ವೈ.ಎಸ್, ಕೆ. ಎಮ್.ಜೆ, ಎಸ್.ಜೆ.ಎಮ್ ಹಾಗೂ ಇನ್ನಿತರ ಸುನ್ನೀ ಸಂಘಗಳ ಸಂಯುಕ್ತಾಶ್ರಯದಲ್ಲಿ ‘ಅನುಪಮ ನಾಯಕ ; ಅನರ್ಘ್ಯ ಸಂದೇಶ’ ಎಂಬ ಧ್ಯೇಯ ವಾಕ್ಯದೊಂದಿಗೆ ಬೃಹತ್ ಮೀಲಾದ್ ಸಂದೇಶ ಜಾಥಾವನ್ನು ಹಮ್ಮಿಕೊಳ್ಳಲಾಯಿತು.

- Advertisement -

ನಿಗದಿಯಂತೆ ಶುಕ್ರವಾರ ಅಪರಾಹ್ನ 3 ಗಂಟೆಗೆ ಸರಿಯಾಗಿ ಪವಿತ್ರ ಮದೀನಾ ಶರೀಫ್ ನಿಂದ ತರಿಸಲಾದ ಧ್ವಜವನ್ನು ಸುನ್ನೀ ನೇತಾರರಿಗೆ ಹಸ್ತಾಂತರಿಸಿ ಶೈಖುನಾ ಅಶ್ರಫ್ ಅಹ್ಸನಿ ಉಸ್ತಾದ್ ಪ್ರಾರ್ಥನೆಗೈಯುವ ಮೂಲಕ ಪ್ರಾರಂಭಗೊಂಡ ಜಾಥಾ ವಿರಾಜಪೇಟೆಯ ಆರ್ಜಿ ಗ್ರಾಮದ ಅನ್ವಾರುಲ್ ಹುದಾ ವಿದ್ಯಾಸಂಸ್ಥೆಯಿಂದ ವಿರಾಜಪೇಟೆ ಪಟ್ಟಣದವರೆಗೂ ಸಾಗಿ ಪಟ್ಟಣದ ಹೃದಯ ಭಾಗದಲ್ಲಿ ಸಮಾಪ್ತಿಗೊಂಡಿತು.

ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗೈದ ಎಸ್. ಎಸ್. ಎಫ್  ರಾಷ್ಟ್ರೀಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿರವರು ‘ಅನುಪಮ ವ್ಯಕ್ತಿತ್ವದ ಪೈಗಂಬರ್ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರವರು ಈ ಜಗತ್ತಿಗೆ ಸಾರಿದ ಸಂದೇಶಗಳು ನಿತ್ಯ ನೂತನವಾಗಿದ್ದು ಆಧುನಿಕ ಜಗತ್ತಿನ ಸರ್ವ ಸಮಸ್ಯೆಗಳಿಗೂ ಅವರ ಸಂದೇಶಗಳಲ್ಲಿ ಪರಿಹಾರವಿದ್ದು ಆಧುನಿಕ ತಲೆಮಾರು ಪ್ರವಾದಿವರ್ಯರ ಕುರಿತು ಆಳವಾಗಿ ಅಧ್ಯಯನ ನಡೆಸಬೇಕೆಂದರು’.             

- Advertisement -

ಅನ್ವಾರುಲ್ ಹುದಾ ಸಂಸ್ಥೆಯ ಉಪಾಧ್ಯಕ್ಷರಾದ ಸಯ್ಯಿದ್ ಶಾಫಿ ಬಾ ಅಲವಿ ಮದೀನತುಲ್ ಮುನವ್ವರರವರು  ಸಮಾರೋಪ  ಪ್ರಾರ್ಥನೆ ನಡೆಸಿ ಆಶೀರ್ವದಿಸಿದರು.

ಜಾಥಾದಲ್ಲಿ ಜಿಲ್ಲೆಯ ನಾಇಬ್ ಖಾಜಿ ಶಾದುಲಿ ಫೈಜಿ ಉಸ್ತಾದ್, ಹಫೀಳ್ ಸಅದಿ ಉಸ್ತಾದ್, ಅಬ್ದುಲ್ಲ ಸಖಾಫಿ ಉಸ್ತಾದ್, ರಊಫ್ ಸಖಾಫಿ ಉಸ್ತಾದ್, ಅನ್ವಾರುಲ್ ಹುದಾ ಸಂಸ್ಥೆ ಉಪಾಧ್ಯಕ್ಷರಾದ ಅಬೂಬಕ್ಕರ್ ಹಾಜಿ ಹಾಗೂ ಉಲಮಾ, ಉಮರಾ, ಸಾಮಾಜಿಕ ನೇತಾರರು ಭಾಗಿಯಾಗಿದ್ದರು.

ಸ್ವಾಗತ ಸಮಿತಿ ಚೇರ್ಮನ್ ಅಹಮದ್ ಮದನಿ ಸ್ವಾಗತಿಸಿ ಕನ್ವೀನರ್ ಸಿ. ಆರ್. ಪಿ ಉಮರ್ ಎಡಪಾಲ ವಂದಿಸಿದರು.

Join Whatsapp