ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಪ್ರಸಕ್ತ ಸಾಲಿನಲ್ಲಿ ಪ್ರಕೃತಿ ವಿಕೋಪ ರಕ್ಷಣಾ ಕಾರ್ಯಚರಣೆಗೆ ವಿವಿಧ ಇಲಾಖೆಗಳಿಂದ ಬಳಸಲಾಗುವ 4*4 ಜೀಪ್ ಗಳು, ಜೆಸಿಬಿ, ಹಿಟಾಚಿ, ಕ್ರೇನ್ ಮತ್ತಿತರ ವಾಹನಗಳ ಬಳಕೆಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯ ಮಾನದಂಡದ ಅನುಸಾರ ದರ ನಿರ್ಧಾರ ಮಾಡುವ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ತೈಲ ಬೆಲೆ ಮತ್ತು ವಾಹನಗಳ ಬಿಡಿಭಾಗಗಳ ದರ ಹಾಗೂ ಚಾಲಕ/ ಮಾಲೀಕರ ಭತ್ಯೆಯನ್ನು ಪರಿಗಣಿಸಿ ಸಭೆಯಲ್ಲಿ ಹಾಜರಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಮೋಟಾರು ವಾಹನ ನಿರೀಕ್ಷಕರು ಹಾಗೂ ಪಿಡಬ್ಲ್ಯು.ಡಿ ಅಧಿಕಾರಿಗಳ ಅಭಿಪ್ರಾಯ ಪಡೆಯುವುದರ ಜೊತೆಗೆ ಜೀಪ್, ಜೆಸಿಬಿ, ಹಿಟಾಚಿ, ಕ್ರೇನ್ ಮತ್ತಿತರ ವಾಹನಗಳ ಚಾಲಕ, ಮಾಲೀಕರ ಅಭಿಪ್ರಾಯ ಪರಿಗಣಿಸಿ ತುರ್ತು ರಕ್ಷಣಾ ಕಾರ್ಯಾಚರಣೆಗೆ ಬಳಸುವ ವಾಹನಗಳ ಬಾಡಿಗೆ ದರ ನಿಗದಿಪಡಿಸಲಾಗಿದೆ.
ನಿಗದಿಪಡಿಸಲಾದ ದರದ ವಿವರ: ಜೀಪ್ ರೂ. 3,750(ಒಂದು ದಿನಕ್ಕೆ), ಜೆಸಿಬಿ(ಸ್ಟಾಡಿಂಗ್) ರೂ. 950(ಒಂದು ಗಂಟೆಗೆ), ರೂ.7 ಸಾವಿರ(ಒಂದು ದಿನಕ್ಕೆ), ಹಿಟಾಚಿ ರೂ.7 ಸಾವಿರ(ಶಿಪ್ಟಿಂಗ್(ಒನ್ಸೈಡ್), ಹಿಟಾಚಿ(1.1) ರೂ.1,150(ಒಂದು ಗಂಟೆಗೆ), ಹಿಟಾಚಿ(1.2) ರೂ.1,250(ಒಂದು ಗಂಟೆಗೆ), ಕ್ರೇನ್(101 ಕೆಪಾಸಿಟಿ) ರೂ.950(ಒಂದು ಗಂಟೆಗೆ), ಕ್ರೇನ್(151 ಕೆಪಾಸಿಟಿ) ರೂ.975(ಒಂದು ಗಂಟೆಗೆ) ಹಾಗೂ ಕ್ರೇನ್(201 ಕೆಪಾಸಿಟಿ) ರೂ.1,150 (ಒಂದು ಗಂಟೆಗೆ) ನಿಗದಿ ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ ಅವರು ತಿಳಿಸಿದ್ದಾರೆ.