ಕೊಡ್ಲಿಪೇಟೆ :ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನವರ ಕಾರಿಗೆ ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆದ ಆರೋಪಿ ಸಂಪತ್ ನನ್ನ ಬೆಂಬಲಿಗನಲ್ಲ .ಅವನನ್ನು ಗೊತ್ತೇ ಇಲ್ಲ ಎಂದು ಮಾಜಿ ಸಚಿವ ಬಿ.ಎ.ಜೀವಿಜಯ ಹೇಳಿದರು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ನಲ್ಲಿ ಇದ್ದಾಗ ಅವನನ್ನು ನೋಡಿಯೇ ಇಲ್ಲ . ಆತ ನಮ್ಮ ಪಕ್ಷದ ಬೆಂಬಲಿಗನೂ ಅಲ್ಲ. ಕಾರ್ಯಕರ್ತನೂ ಅಲ್ಲ . ಶಾಸಕ ಅಪ್ಪಚ್ಚುರಂಜನ್ ಬೆಂಬಲಿಗ ಎಂಬುದಕ್ಕೆ ಹಲವಾರು ಪೊಟೋಗಳಿವೆ. ನನ್ನ ಜೊತೆ ಇರುವ ಒಂದು ಪೊಟೋ ಆದರೂ ಇದೆಯಾ ಎಂದು ಪ್ರಶ್ನಿಸಿದರು.
ನನಗೆ ಬಂದಿರುವ ಮಾಹಿತಿ ಪ್ರಕಾರ ಅವನಿಗೆ ಅಪ್ಪಚ್ಚುರಂಜನ್ ಕಾಮಾಗಾರಿಯ ಗುತ್ತಿಗೆಯನ್ನು ನೀಡಿದ್ದಾರೆ .2004 ರಲ್ಲಿ ಅಂದಿನ ಬಿಜೆಪಿ ಸರ್ಕಾರದ ಸಮಯದಲ್ಲಿ ಸಂಪತ್ ನ ತಂದೆಯನ್ನು ಸೋಮವಾರಪೇಟೆ ಪಟ್ಟಣ ಪಂಚಾಯತ್ ಸದಸ್ಯನಾಗಿ ನಾಮ ನಿರ್ದೆಶನ ಮಾಡಿದ್ದಾರೆ.
ಇವರು ಬಿಜೆಪಿ ಪಕ್ಷದ ಕಾರ್ಯಕರ್ತ ಎಂಬುದು ಇದರಲ್ಲೇ ಗೊತ್ತಾಗುತ್ತದೆ. ಶಾಸಕರು ತಮ್ಮ ತಪ್ಪನ್ನು ಮರೆಮಾಚಲು ಸುಳ್ಳನ್ನು ಸೃಷ್ಟಿ ಮಾಡಿ ಹೇಳುತ್ತಿದ್ದಾರೆ.
ಭಾರತೀಯ ಜನತಾ ಪಕ್ಷದವರು ನಮ್ಮ ನಾಯಕರಾದಸಿದ್ದರಾಮಯ್ಯ ನವರು ಬರುವಾಗ ಗುಡ್ಡೆಹೊಸುರಿನಲ್ಲಿ ಮಾತ್ರ ಗಲಾಟೆ ಮಡಿದ್ದಲ್ಲ ತಿತಿಮತಿ ಮಡಿಕೇರಿ ಸೋಮವಾರಪೇಟೆ ಶನಿವಾರಸಂತೆ ಯಲ್ಲೂ ಮಾಡಿದ್ದಾರೆ. ರಕ್ಷಣೆ ಮಾಡುವಲ್ಲಿ ಪೊಲೀಸರ ವ್ಯೆಫಲ್ಯವಿದೆ. ಗುಡ್ಡೆಹೊಸೂರು ಘಟನೆಯ ಆರೋಪಿಗಳನ್ನು ಬಿಡಿಸಲು ರಾತ್ರಿ ಅಪ್ಪಚ್ಚುರಂಜನ್ ಮತ್ತು ಬೋಪಯ್ಯ ಯಾಕೆ ಪೊಲೀಸ್ ಠಾಣೆಗೆ ಹೊಗಿದ್ದರು ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಬಲಿಷ್ಠವಾಗಿದೆ ಇದರಿಂದ ಹತಾಷರಾಗಿ ಬಿಜೆಪಿಯವರು ಈ ರೀತಿಯ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.
ಅವನು ಕಾಂಗ್ರೆಸ್ ಪಕ್ಷದ ಸದಸ್ಯನಾಗಿದ್ದರೆ ನಮ್ಮ ನಾಯಕರ ವಿರುದ್ಧ ಯಾಕೆ ಈ ರೀತಿಯಲ್ಲಿ ವರ್ತಿಸುತ್ತಾನೆ. ಬಿಜೆಪಿಯ ಮಂತ್ರಿಗಳಿಗೆ ,ಇಬ್ಬರೂ ಶಾಸಕರುಗಳಿಗೆ ಮೊಟ್ಟೆ ಹೊಡೆಯಲಿ.ಜಿಲ್ಲೆಯ ಇವರ ಪಕ್ಷದ ಹಲವು ಮಂತ್ರಿಗಳು .ಮುಖಂಡರುಗಳು ಬಂದಾಗ ನಾವೇನು ಇಂತಹ ಕೀಳು ಮಟ್ಟದ ಕೆಲಸ ಮಾಡಿದ್ದೆವೇಯೇ. ಚುನಾವಣೆ ಸಮಯದಲ್ಲಿ ಯಾವ ರೀತಿಯಲ್ಲಿ ಯಾದರೂ ಕಾಂಗ್ರೆಸ್ ಗೆ ಹಿನ್ನಡೆಯಾಗಬೆಂದು ಜಾತಿಗಳ ಮದ್ಯೆ ಓಡೆದು ಆಳುವ ನೀತಿ ಎಸಗುವುದು ಅವರ ಅಜೆಂಡಾ ಅದರಿಂದ ಈ ರೀತಿಯಲ್ಲಿ ಮಾಡಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಂದ್ರಶೇಖರ್ , ಹಿಂದುಳಿದ ವಿಭಾಗ ಬ್ಲಾಕ್ ಸಮಿತಿ ಅದ್ಯಕ್ಷ ಗಂಗಾಧರ್, ಕೊಡ್ಲಿಪೇಟೆ ವಲಯ ಕಾಂಗ್ರೆಸ್ ಅದ್ಯಕ್ಷ ಔರಂಗಜೇಬ್ ,ಪಕ್ಷದ ಮುಖಂಡರು ಕೊಡ್ಲಿಪೇಟೆ ಗ್ರಾ.ಪಂ.ಸದಸ್ಯ ಕೆ.ಆರ್.ಚಂದ್ರಶೇಖರ್ ಇದ್ದರು.