ಸೆ.27 ರ ಭಾರತ್ ಬಂದ್ ಗೆ ಸಭೆ ನಡೆಸಿ ಬೆಂಬಲ ವ್ಯಕ್ತಪಡಿಸಿದ ಕೊಡಗು ರೈತಪರ ಸಂಘಟನೆಗಳು

Prasthutha|

ದಿನಾಂಕ 23.9.2021ರಂದು ಮಡಿಕೇರಿಯ ಕೂರ್ಗ್ ಕಮ್ಯುನಿಟಿ ಹಾಲ್ ನಲ್ಲಿ  ಸಂಯುಕ್ತ ಕಿಸಾನ್ ಮೋರ್ಚಾ 27-9-2021 ರಂದು ಭಾರತ ಬಂದಿಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಗೆ ಭೂಮಿ ಮತ್ತು ವಸತಿ ವಂಚಿತರ ಸಮಿತಿ, ಡಿ.ಎಸ್.ಎಸ್,ಕರ್ನಾಟಕ ರಾಜ್ಯ ರೈತ ಸಂಘ , ಕಾಂಗ್ರೆಸ್‌, ಜೆಡಿಎಸ್,ಎಸ್.ಡಿ.ಪಿ.ಐ , RYFI, ದಲಿತ ಹಿತರಕ್ಷಣಾ ಒಕ್ಕೂಟ,  ಬಿಎಸ್ಪಿ, ಸಿಪಿಐಎಂಎಲ್(ರೆಡ್ ಸ್ಟಾರ್), ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರತಿನಿಧಿಗಳು ಭಾಗವಹಿಸಿದ್ದರು.   

- Advertisement -

 ಭೂಮಿ ಮತ್ತು ವಸತಿ ವಂಚಿತರ ಸಮಿತಿ ಕೊಡಗು ಜಿಲ್ಲಾಧ್ಯಕ್ಷರಾದ ಅಮೀನ್ ಮೊಹ್ಸಿನ್ ಸ್ವಾಗತ ಭಾಷಣ ಮಾಡಿ ಸಭೆಯ ಉದ್ದೇಶವನ್ನು ತಿಳಿಸಿ ಬಂದ ಅತಿಥಿಗಳಿಗೆ ಸ್ವಾಗತ ಕೋರಿದರು, ಡಿ.ಎಸ್ ನಿರ್ವಾಣಪ್ಪನವರು ಕ್ರಾಂತಿ ಗೀತೆ ಹಾಡಿ ಪ್ರಾಸ್ತಾವಿಕ ಭಾಷಣ ಮಾಡಿ ಪ್ರಸಕ್ತ ರೈತರ ಹೋರಾಟಕ್ಕೆ ಬೆಂಬಲ ನೀಡುವುದು ಆದ್ಯ ಕರ್ತವ್ಯ ಎಂದು ತಿಳಿಸಿದರು, ಈ ಸಂದರ್ಭದಲ್ಲಿ ತನ್ನೀರ ಮೈನ ಕೊಡಗು ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾ ಅಧ್ಯಕ್ಷರ, ಕೆ.ಆರ್.ಆರ್.ಎಸ್ ನ ಸುಜೈ ಭೋಪಯ್ಯ, ಸುರಯ್ಯ ಅಬ್ರಾರ್  ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು, ಕಾವೇರಿ ಕೊಡಗು ಜಿಲ್ಲಾ ಭೂಮಿ ಮತ್ತು ವಸತಿ  ವಂಚಿತರ ಸಮಿತಿ , ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಕೊಡಗು ಜಿಲ್ಲಾಧ್ಯಕ್ಷ ಇಸಾಕ್ ಖಾನ್,  ಎಸ್ಡಿಪಿಐನ ಸಮೀರ್  ಹಾಗೂ ಇತರರು ಈ ವಿಷಯದ ಬಗ್ಗೆ ವಿಷಯ ಮಂಡಿಸಿದರು.

 27-9-2021 ರಂದು ರೈತಸಂಘಟನೆಗಳು ಕರೆ ನೀಡಿರುವ ಭಾರತ ಬಂದಿಗೆ ಸಂಪೂರ್ಣ ಬೆಂಬಲ ನಿರ್ಣಯವನ್ನು ಕೈಗೊಳ್ಳಲಾಯಿತು, ಸಾರ್ವಜನಿಕರು ಹಾಗೂ ವರ್ತಕರಿಂದ ಬಂದಿಗೆ ಸಂಪೂರ್ಣ ಬೆಂಬಲ  ಕೋರಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಮೊನ್ನಪ್ಪನವರು ವಂದಿಸಿದರು.

- Advertisement -

ಈ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಜಿಲ್ಲಾಧ್ಯಕ್ಷ ಅಮೀನ್ ಮೊಹ್ಸಿನ್, ಗೌರವ ಅಧ್ಯಕ್ಷ ನಿರ್ವಾಣಪ್ಪ,ಸದಸ್ಯೆ ಕಾವೇರಿ,ಕರ್ನಾಟಕ ರಾಜ್ಯ ರೈತ ಸಂಘದ ಪಿ.ಎಂ .ಮಾದಪ್ಪ,ಪಿ.ಟಿ.ಸುಬ್ಬಯ್ಯ, ಸುಜೈ ಬೋಪಯ್ಯ ,ತನ್ನಿರ ಮೈನಾ ಕೊಡಗು ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾ ಅಧ್ಯಕ್ಷರ,ರಾಜೇಶ್ ಎಲ್ಲಪ್ಪ ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷರು, ಪ್ರಕಾಶ್ ಆಚಾರ್ಯ ಕಾಂಗ್ರೆಸ್ ಮುಖಂಡರು, ನೂರುದ್ದೀನ್ ಮಡಿಕೇರಿ ನಗರ SDPI ಅಧ್ಯಕ್ಷರು, ಹಂಸ ಕಾಂಗ್ರೆಸ್ ಮಡಿಕೇರಿ ಬ್ಲಾಕ್ ಅಧ್ಯಕ್ಷರು, ಇಸಾಖ್ ಖಾನ್ ಅಧ್ಯಕ್ಷರು ಜೆಡಿಎಸ್ ಅಲ್ಪಸಂಖ್ಯಾತರ ಘಟಕ, ಜಯಣ್ಣ RYFI, ಹೊನ್ನಪ್ಪ ದಲಿತ ಹಿತರಕ್ಷಣಾ ಸಮಿತಿ, ಜಯಪ್ಪ ಹಾನಗಲ್ ಬಿಎಸ್ಪಿ ಜಿಲ್ಲಾ ಉಸ್ತುವಾರಿ, ಉಬೈದ್ SDPI, ಕೆ ಯು ಚಂದ್ರಪ್ಪ ರೈತ ಸಂಘ ಅಧ್ಯಕ್ಷರು, ತನುಜಾ ವತಿ ಎಸ್ಡಿಪಿಐ, , ಸುರಯ್ಯ ಅಬ್ರಾರ್ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು, ಕುಸುಮಾವತಿ ಬಿಎಸ್ಪಿ ಸದಸ್ಯರು, ರೂಪಯ್ಯ ಕರ್ನಾಟಕ ರಾಜ್ಯ ರೈತ ಸಂಘ, ಎಂ.ಬಿ ಹಮೀದ್ ಗ್ರಾಮ  ಪಂಚಾಯತ್ ಸದಸ್ಯರು, ಪ್ರಿಥ್ವಿ ಆಪ್ ವಕ್ತಾರ,ಹೊಣಪ್ಪ ದಲಿತ ಹಿತರಕ್ಷಣಾ ಒಕ್ಕೂಟ, ಕೆ.ಯು.ಚಂದ್ರಪ್ಪ ರೈತ ಸಂಘ ಹಾಗು ಇತರರು ಹಾಜರಿದ್ದರು..

Join Whatsapp