ಕೊಡಗು: ಪಾಲಿಬೆಟ್ಟದಲ್ಲಿ ಹುಲಿ ಪತ್ತೆಗೆ ಕಾರ್ಯಾಚರಣೆ

Prasthutha|

ಮಡಿಕೇರಿ : ಪಾಲಿಬೆಟ್ಟ ಭಾಗದ ಕಾಫಿ ತೋಟದಲ್ಲಿ ಕಾಣಿಸಿಕೊಂಡಿರುವ ಹುಲಿಯನ್ನ ಪತ್ತೆ ಹಚ್ಚಲು ವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ ನೇತೃತ್ವದಲ್ಲಿ ಮಸ್ಕಲ್, ಎಲಿಜಾ ಹಾಗೂ ದುಬಾರಿ ಕಾಫಿ ತೋಟದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು.
ಪಾಲಿಬೆಟ್ಟ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಹುಡುಕಾಟ ನಡೆಸಲಾಗಿದ್ದರೂ ಹುಲಿ ಪತ್ತೆಯಾಗಲಿಲ್ಲ.

- Advertisement -


ದುಬಾರಿ ಕಾಫಿ ತೋಟದಲ್ಲಿ ಹಸುವನ್ನು ಬಲಿ ಪಡೆದುಕೊಂಡ ಸ್ಥಳದಲ್ಲಿ ನಾಲ್ಕು ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು,
ಕಾರ್ಯಾಚರಣೆ ಚುರುಕುಗೊಂಡಿದೆ. ಹುಲಿಯ ಹೆಜ್ಜೆ ಗುರುತು ಹಾಗೂ ಚಲನವಲನ ಗಮನಿಸಲು ಆರ್ ಆರ್ ಟಿ ತಂಡ ತೋಟದಲ್ಲೇ ಬೀಡು ಬಿಟ್ಟಿದ್ದಾರೆ. ಉಪವಲಯ ಅರಣ್ಯಾಧಿಕಾರಿ ಸಂಜೀತ್ ಸೋಮಯ್ಯ, ಅರಣ್ಯ ರಕ್ಷಕ ಅರುಣಾ ಸೇರಿದಂತೆ ಮತ್ತಿತರರಿದ್ದರು.

Join Whatsapp