► 8ನೇ ಬಾರಿ ಚಾಂಪಿಯನ್ ಪ್ರಶಸ್ತಿ ತನ್ನದಾಗಿಸಿಕೊಂಡ ಫ್ರೀಡಮ್ ಬಾಯ್ಸ್ ಹುಂಡಿ
ನಾಪೋಕ್ಲು: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಎಸ್.ಆರ್.ಎಸ್ ಕ್ರಿಕೆಟರ್ಸ್ ಮೂರ್ನಾಡು ಆಶ್ರಯದಲ್ಲಿ 18ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಯ ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಮೈದಾನದಲ್ಲಿ ನಡೆಯಿತು.
ಫ್ರೀಡಮ್ ಬಾಯ್ಸ್ ಹುಂಡಿ ಹಾಗೂ ಬ್ಯಾರಿ ವಾರಿಯರ್ಸ್ ಮಡಿಕೇರಿ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪ್ರಶಸ್ತಿಯನ್ನು ಫ್ರೀಡಮ್ ಬಾಯ್ಸ್ ಹುಂಡಿ ತಂಡ ಪಡೆದುಕೊಂಡಿತು. ಬ್ಯಾರಿ ವಾರಿಯರ್ಸ್ ಮಡಿಕೇರಿ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.
ಬೆಸ್ಟ್ ಟೀಮ್ ಆಫ್ ದಿ ಟೂರ್ನಮೆಂಟ್ ಬ್ಲ್ಯಾಕ್ ಸ್ಟೋನ್ ಕೂಡಿಗೆ, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಫ್ರೀಡಮ್ ಬಾಯ್ಸ್ ರಫೀಕ್ ಹುಂಡಿ, ಬೆಸ್ಟ್ ಫೀಲ್ಡರ್ ಶಫೀಕ್ ಕುಂಡಂಡ ಲಕ್ಕಿ ಬಾಯ್ಸ್ ಕುಂಜಿಲ, ಉದಯೋನ್ಮುಖ ಆಟಗಾರ ಕ್ರೌನ್ ವಿರಾಜಪೇಟೆ ತಂಡದ ಅಫ್ರಾನ್, ಬೆಸ್ಟ್ ಬ್ಯಾಟ್ಸ್ ಮ್ಯಾನ್ ಕೆವೈಸಿಸಿ ಕಡಂಗ ತಂಡದ ಅಸ್ಕರ್, ಬೆಸ್ಟ್ ಬೌಲರ್ ಬ್ಲ್ಯಾಕ್ ಕೋಬ್ರಾ ವಿರಾಜಪೇಟೆ
ತಂಡದ ಇಚ್ಚಾವು, ಮ್ಯಾನ್ ಆಫ್ ಸೀರಿಯಸ್ ಫ್ರೀಡಮ್ ಬಾಯ್ಸ್ ಹುಂಡಿ ತಂಡದ ರಿಯಾಸ್ (ಇಯ್ಯಾ ) ಪಡೆದುಕೊಂಡರು.
ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಸಂಸ್ಥಾಪಕ ಕುಪ್ಪೋಡಂಡ ರಶೀದ್ ಎಡಪ್ಪಾಲ ಹಾಗೂ ಕೊಡಗಿನ ಹಿರಿಯ ಆಟಗಾರ ಮುಜೀಬ್ ಮೂರ್ನಾಡು ಅವರನ್ನು ಎಸ್.ಆರ್.ಎಸ್ ಕ್ರಿಕೆಟರ್ಸ್ ಮೂರ್ನಾಡು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ತೀರ್ಪುಗಾರರಾಗಿ ಮದನ್ ಯಾಲದಾಳು, ದಿವಿನ್ ರೈ ಗಾಳಿಬೀಡು, ವೀಕ್ಷಕ ವಿವರಣೆಗಾರನಾಗಿ ದಿವಾಕರ್ ಉಪ್ಪಳ, ಕಾರ್ಯನಿರ್ವಹಿಸಿದರು.