ಮಡಿಕೇರಿ: ಸಂಕಷ್ಟಕ್ಕೆ ಸಿಲುಕಿದ ಐವರು ಅಯ್ಯಪ್ಪ ಮಾಲಾಧಾರಿಗಳು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಎಡತ್ತರ ಗ್ರಾಮದಲ್ಲಿರುವ ಮಸೀದಿಯಲ್ಲಿ ಆಶ್ರಯ ಪಡೆದಿದ್ದಾರೆ.
ಬೆಳಗಾವಿಯಿಂದ ಶಬರಿಮಲೆಗೆ ಹೊರಟಿದ್ದ ಅಯ್ಯಪ್ಪ ಮಾಲಾಧಾರಿಗಳು ಮಳೆ ಮತ್ತು ಕತ್ತಲಾದ ಕಾರಣ ಮಸೀದಿಯ ಧರ್ಮ ಗುರುಗಳಿಗೆ ತಂಗಲು ಅವಕಾಶ ನೀಡುವಂತೆ ಕೇಳಿದ್ದರು. ಮಾಲಾಧಾರಿಗಳ ಕೋರಿಕೆಗೆ ಸ್ಪಂದಿಸಿದ ಮಸೀದಿ ಆಡಳಿತ ಮಂಡಳಿ, ಮಸೀದಿ ಬಳಿಯಲ್ಲೇ ಮಲಗಲು ವ್ಯವಸ್ಥೆ ಮಾಡಿಕೊಡಲಾಗಿದೆ.
ಐವರು ಭಕ್ತರು ರಾತ್ರಿ ಮಸೀದಿಯಲ್ಲೇ ತಂಗಿ ಬೆಳಗ್ಗೆ ಪ್ರಯಾಣ ಮುಂದುವರಿಸಿದ್ದಾರೆ. ಮಸೀದಿ ಆಡಳಿತ ಮಂಡಳಿ, ಧರ್ಮಗುರುಗಳ ಈ ನಿರ್ಣಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.