ಮಡಿಕೇರಿ: ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೊಡಗಿನ ಸೋಮವಾರಪೇಟೆ ಪಟ್ಟಣ ಸಮೀಪದ ಮಸಗೋಡು ಗ್ರಾಮದ ಶ್ವೇತಾ(28) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ.
11 ತಿಂಗಳ ಹಿಂದೆ ತಮ್ಮ ಸಂಬಂಧಿಯಾಗಿರುವ ಅಭಿಷೇಕ್ ಅವರೊಂದಿಗೆ ವಿವಾಹವಾಗಿದ್ದ ಶ್ವೇತಾ ಬೆಂಗಳೂರಿನಲ್ಲಿ ವಾಸವಾಗಿದ್ದರು. ಆತ್ಮಹತ್ಯೆಗೆ ಯಾವುದೇ ನಿಖರ ಕಾರಣಗಳು ತಿಳಿದುಬಂದಿಲ್ಲ.
ಆಪ್ತ ಬಂಧುಗಳ ಸಮ್ಮುಖದಲ್ಲಿ ಯುವತಿಯ ಅಂತ್ಯಕ್ರಿಯೆ ಮಸಗೋಡು ಗ್ರಾಮದಲ್ಲಿ ನಡೆಯಿತು.