ಕೊಡಗು: ಮರ ಬಿದ್ದು ಕಾರ್ಮಿಕ ಸಾವು

Prasthutha|

ಮಡಿಕೇರಿ: ಮರ ಬಿದ್ದು ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಹೊಸಕೋಟದಲ್ಲಿ ಸಂಭವಿಸಿದೆ.

- Advertisement -

ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಹ್ಯ ಗ್ರಾಮದ ಪ್ರಕಾಶ್ (45) ಮೃತ ದುರ್ದೈವಿ.ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕೂಲಿ ಕಾರ್ಮಿಕನಾಗಿರುವ ಪ್ರಕಾಶ್ ಇಂದು ಬೆಳಿಗ್ಗೆ ಅಮ್ಮತ್ತಿ ಹೊಸಕೋಟದ ಕಾಫಿ ತೋಟ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಘಟನೆ ನಡೆದಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮರವೊಂದು ಹಠಾತ್ತನೆ ಪ್ರಕಾಶ್ ಅವರ ತಲೆ ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

- Advertisement -

ಸ್ಥಳಕ್ಕೆ ವಿರಾಜಪೇಟೆ ತಹಶಿಲ್ದಾರರಾದ ಅರ್ಚನಾ ಭಟ್, ಅಮ್ಮತ್ತಿ ಹೋಬಳಿ‌ ಕಂದಾಯ ಪರಿವೀಕ್ಷಕ ಅನಿಲ್ ಭೇಟಿ ನೀಡಿ‌ ಪರಿಶೀಲಿಸಿದ್ದಾರೆ.



Join Whatsapp