ಕೊಡಗು: ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಹುಲಿಯ ಚಿತ್ರ

Prasthutha|

ಮಡಿಕೇರಿ: ಹಸುವಿನ ಮೇಲೆ ದಾಳಿ ಮಾಡುತ್ತಿರುವ ಹುಲಿಯ ಚಿತ್ರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಮಾರ್ಗೊಲ್ಲಿ ಟಾಟಾಕಾಫಿ ತೋಟದ ಸಿಸಿ ಕ್ಯಾಮರಾದಲ್ಲಿ ಹುಲಿಯ ಚಿತ್ರ ಸೆರೆಯಾಗಿದೆ.

- Advertisement -


ಬುಧವಾರ ರಾತ್ರಿ ಪಾಲಿಬೆಟ್ಟ ದುಬಾರಿ ತೋಟದಲ್ಲಿ ಹುಲಿ ದಾಳಿಗೆ ಕಾಡು ಎತ್ತು ಬಲಿಯಾಗಿತ್ತು. ಇದೇ ದಿನ ರಾತ್ರಿ ಮಾರ್ಗೊಲ್ಲಿ ತೋಟದ ಸಿಸಿ ಕ್ಯಾಮರಾದಲ್ಲಿ ಹುಲಿಯ ಚಿತ್ರ ಸೆರೆಯಾಗಿದೆ. ಈ ಭಾಗದ ತೋಟ ಕಾರ್ಮಿಕರು ಭೀತಿಯಲ್ಲಿದ್ದಾರೆ. ಹುಲಿಯ ಸೆರೆಗೆ ತಂಡವನ್ನು ರಚಿಸಿರುವುದಾಗಿ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದರು.

Join Whatsapp