ಕೊಡಗು: ಮುಂದುವರಿದ ಮಳೆ; ಹಲವೆಡೆ ಭೂ ಕುಸಿತ

Prasthutha|

ಕೊಡಗು:  ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದೆ. ಚೆಂಬು ಗ್ರಾಮದಲ್ಲಿ ಜೂನ್‌ನಲ್ಲಿ ಏಳು ಬಾರಿ ಭೂಕಂಪನವಾಗಿದ್ದು, ಜಿಲ್ಲೆಯಲ್ಲೇ ಅತಿ ಹೆಚ್ಚು ಮುಂಗಾರು ಹಾನಿಗೊಳಗಾದ ಗ್ರಾಮ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

- Advertisement -

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರು ಭೂಕುಸಿತಗಳು ಉಂಟಾಗಿ ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿವೆ.

ಗ್ರಾಮದಲ್ಲಿ ಹರಿಯುತ್ತಿರುವ ಪಯಸ್ವಿನಿ ನದಿ ತುಂಬಿ ತುಳುಕುತ್ತಿದ್ದು, ಹಲವೆಡೆ ಜಲಾವೃತದಿಂದಾಗಿ ಹಲವಾರು ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ನದಿ ತುಂಬಿ ಹರಿಯುತ್ತಿರುವುದರಿಂದ  ಈ ಪ್ರದೇಶದ ಅನೇಕ ಮನೆಗಳು ಪ್ರವಾಹದ ಹೊಡೆತಕ್ಕೆ ಸಿಲುಕಿವೆ. ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ನಿರ್ಮಾಣ ಹಂತದ ಸೇತುವೆ  ಕುಸಿದು ಬಿದ್ದಿದೆ.

Join Whatsapp