ಕೊಡಗು: ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ರಾಜ್ಯಪಾಲರ ಭೇಟಿ

Prasthutha|

ಮಡಿಕೇರಿ: ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿ ವೀಕ್ಷಿಸಿದ ರಾಜ್ಯಪಾಲ  ಥಾವರ್ ಚಂದ್ ಗೆಹ್ಲೋಟ್, ಇಲ್ಲಿನ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು. 

- Advertisement -

ಸ್ಮಾರಕ ಭವನದಲ್ಲಿರುವ  ಯುದ್ಧ ಟ್ಯಾಂಕ್,  ಯುದ್ಧ ಹಡಗು, ಯುದ್ಧ ವಿಮಾನವನ್ನು ವೀಕ್ಷಿಸಿದ ಬಳಿಕ ಜನರಲ್ ತಿಮ್ಮಯ್ಯ ಅವರ ಬಾಲ್ಯ ಜೀವನ, ವಿದ್ಯಾಭ್ಯಾಸ, ಸೇನಾ ಕ್ಷೇತ್ರದಲ್ಲಿ ಮಾಡಿರುವ  ಸಾಧನೆಗಳ ಬಗ್ಗೆ ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು. 

ದೇಶದ ಬಗ್ಗೆ ಜನರಲ್ ತಿಮ್ಮಯ್ಯ ಅವರಿಗೆ ಇದ್ದ ಸಮರ್ಪಣಾ ಭಾವ ಹಾಗೂ ದೇಶ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದನ್ನು ಕೊಂಡಾಡಿದ ರಾಜ್ಯಪಾಲರು, ಜನರಲ್ ತಿಮ್ಮಯ್ಯ ಅವರ ಬದುಕು, ಜೀವನವು ಯುವ ಜನತೆಗೆ ಪ್ರೇರಣಾದಾಯಕವಾಗಿದೆ. ದೇಶದ ಯುವ ಜನತೆ ಕೊಡಗಿಗೆ ಪ್ರವಾಸಕ್ಕೆ ಬಂದಾಗ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಭೇಟಿ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.

- Advertisement -

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನಾ, ನಾನಾ ಇಲಾಖೆ ಅಧಿಕಾರಿಗಳು ಇದ್ದರು.



Join Whatsapp