ಕೊಡಗಿನಲ್ಲಿ ಹುತ್ತರಿ ಸಂಭ್ರಮ; ವಿಶೇಷ ತಿನಿಸುಗಳ ತಯಾರಿ

Prasthutha|

ಮಡಿಕೇರಿ: ಹುತ್ತರಿ ಹಬ್ಬದ ಸಂಭ್ರಮಕ್ಕೆ ಕೊಡಗು ಜನರು ಸಜ್ಜಾಗಿದ್ದು, ಈ ಬಾರಿ ನವೆಂರ್ 20ರ ಹುಣ್ಣಿಮೆಯ ದಿನ ನಡೆಯಲಿದೆ.
ಕೊಡಗಿನಾದ್ಯಂತ ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವುದೆ ಹುತ್ತರಿ ಹಬ್ಬ. ಭಕ್ತ ಬೆಳೆಯು ತೆನೆಬಿಟ್ಟು ಹೊಂಬಣ್ಣಕ್ಕೆ ತಿರುಗುತ್ತಿದ್ದಂತೆ ಕೊಡಗು ಜನರು ಕದಿರು ತೆಗೆದು ಹುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

- Advertisement -


ಮನೆಯಲ್ಲಿ ವಿಶೇಷ ತಿನಿಸುಗಳನ್ನು ಮಾಡಿ ಪಟಾಕಿ ಸಿಡಿಸಿ ಮನೆಮಂದಿಯೆಲ್ಲಾ ಸೇರಿ ಆಚರಿಸುವ ಹಬ್ಬವೇ ಹುತ್ತರಿ ಹಬ್ಬ. ಪುತ್ತರಿ ಎಂದರೆ ಕೊಡಗಿನಲ್ಲಿ (ಪುದಿಯ ಅರಿ) ಅಂದರೆ ಹೊಸ ಅಕ್ಕಿ. ವ್ಯವಸಾಯವನ್ನೇ ನಂಬಿ ಬದುಕುವ ಕೊಡಗಿನ ರೈತರು ಶಾಸ್ತ್ರೋಕ್ತವಾಗಿ ಭಕ್ತದ ವೈರನ್ನು ತೆಗೆದುಕೊಂದು ಮನೆ ತುಂಬಿಸಿಕೊಳ್ಳುತ್ತಾರೆ.

ಆರಂಭದಲ್ಲಿ ಹೈನ್ ಮನೆಯಲ್ಲಿ ನೆರೆ ಕಟ್ಟುವ ಕಾರ್ಯದಲ್ಲಿ ತೋಡಗಿಸಿಕೊಳ್ಳುತ್ತಾರೆ. ಬಳಿಕ ನಿಗದಿಯಾದ ಸಮಯಕ್ಕೆ ಭಕ್ತದ ಗದ್ದೆಗೆ ತೆರಳಿ ಪಟಾಕಿ ಸಿಡಿಸುತ್ತ ಬೆಳಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಪೊಲಿ ಪೊಲಿಯೇ ದೇವಾ ಎಂದು ಕೂಗುತ್ತ ಕದಿರು ಕತ್ತರಿಸಿ ಅವುಗಳನ್ನು ದೇವಾಲಯ ಹಾಗೂ ಮನೆಗಳಿಗೆ ತುಂಬಿಸಿಕೊಳ್ಳುತ್ತಾರೆ.



Join Whatsapp