ಕೊಡಗು: ಕಾಳಜಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ, ಅಗತ್ಯ ಪೌಷ್ಟಿಕ ಆಹಾರ ನೀಡುವಂತೆ ಸೂಚನೆ

Prasthutha|

ಮಡಿಕೇರಿ: ನಗರದ ರೆಡ್ ಕ್ರಾಸ್ ಭವನದ ಕಾಳಜಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ ಭೇಟಿ ನೀಡಿ ಮಾಹಿತಿ ಪಡೆದರು.    

- Advertisement -

ಕಾಳಜಿ ಕೇಂದ್ರದಲ್ಲಿ ಎರಡನೇ ಮೊಣ್ಣಂಗೇರಿ ಗ್ರಾಮದ 35 ಕುಟುಂಬಗಳ 88 ಮಂದಿ ಸಂತ್ರಸ್ತರಿದ್ದು, ಇವರಿಗೆ ಮೊಟ್ಟೆ ಸೇರಿದಂತೆ ಅಗತ್ಯ ಪೌಷ್ಟಿಕ ಆಹಾರ ನೀಡುವಂತೆ ಸೂಚಿಸಿದರು. ಮಕ್ಕಳಿಗೆ ಹಾಲು, ಬಿಸ್ಕೇಟ್, ಮೊಟ್ಟೆಯನ್ನು ಸರ್ಕಾರದ ಮೆನು ಮಾದರಿಯಲ್ಲಿ ಊಟ ಪೂರೈಸುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.

ಕಾಳಜಿ ಕೇಂದ್ರದಲ್ಲಿನ ಸಂತ್ರಸ್ತರಿಗೆ ಪ್ರತಿದಿನವೂ ಸಮಯಕ್ಕೆ ಸರಿಯಾಗಿ ಆಹಾರವನ್ನು ನೀಡಲಾಗುತ್ತದೆ. ವಯೋವೃದ್ದರು, ಗರ್ಭಿಣಿಯರು ಮತ್ತು ಮಕ್ಕಳಿಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ ತಿಳಿಸಿದರು.

- Advertisement -

ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಪೌಷ್ಠಿಕ ಆಹಾರವನ್ನು ನೀಡಲಾಗುವುದು ಎಂದು ಅವರು ಹೇಳಿದರು.

ವೈದ್ಯಕೀಯ ಸಿಬ್ಬಂದ್ದಿಗಳಿಂದ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ರೋಗ ನಿಯಂತ್ರಣ, ಶುಚಿತ್ವ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅರಿವು ಮೂಡಿಸಲಾಯಿತು.

ಕಾಳಜಿ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಬೆಳಗಿನ ಉಪಹಾರದಲ್ಲಿ ಅವಲಕ್ಕಿ ಒಗ್ಗರಣೆ, ಉಪ್ಪಿಟ್ಟು ಮತ್ತು ಶಿರಾ, ಚಿತ್ರನ್ನ, ಇಡ್ಲಿ ಅಥವಾ ದೋಸೆ, ಕಾಫಿ, ಟೀ, ಹಾಲು, ಮಧ್ಯಾಹ್ನದ ಊಟಕ್ಕೆ ಚಪಾತಿ, ತರಕಾರಿ ಪಲ್ಯ ಅಥವಾ ಕಾಳು ಪಲ್ಯ, ಅನ್ನ ಸಾಂಬಾರ್, ಮೊಸರು ಮತ್ತು ಚಟ್ನಿಪುಡಿ, ಮೊಟ್ಟೆ ಮತ್ತು ಬಾಳೆ ಹಣ್ಣು, ಸಾಯಂಕಾಲ ತಿಂಡಿ ಮಂಡಕ್ಕಿ ಚುರುಮುರಿ ಮತ್ತು ಮಿರ್ಚಿ, ಬಿಸ್ಕತ್ ಅಥವಾ ಬನ್, ಕಾಫಿ, ಟೀ,ಹಾಲು. ರಾತ್ರಿ ಊಟಕ್ಕೆ ಚಪಾತಿ, ತರಕಾರಿ ಪಲ್ಯ ಅಥವಾ ಕಾಳು ಪಲ್ಯ, ಅನ್ನ ಸಾಂಬಾರ್ ಮೊಸರು ಮತ್ತು ಚಟ್ನಿ ಪುಡಿ, ಮೊಟ್ಟೆ ಮತ್ತು ಬಾಳೆಹಣ್ಣು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.



Join Whatsapp