ಕೊಡಗು: ಅಲ್ಪಸಂಖ್ಯಾತ ಮುಖಂಡರ ನಿಯೋಗದಿಂದ ಡಿಜಿಪಿ ಭೇಟಿ

Prasthutha|

ಮಡಿಕೇರಿ: ಕೊಡಗಿನ ಕೆಲವು ಅಲ್ಪಸಂಖ್ಯಾತ ಮುಖಂಡರು ಇಂದು ಬೆಂಗಳೂರಿಗೆ ತೆರಳಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಪ್ರವೀಣ್ ಸೂದ್ ಮತ್ತು ಅಪರಾಧ ವಿಭಾಗದ ಸಹಾಯಕ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಸೀಮಾ ಲಾಟ್ಕರ್ ಅವರನ್ನು ಖುದ್ದಾಗಿ ಭೇಟಿಯಾಗಿ ಸಮಾಲೋಚನೆ ನಡೆಸಿದರು.

- Advertisement -

ಕೊಡಗಿನಲ್ಲಿ ಜನಾಂಗೀಯ ನಿಂದನೆ ಮೂಲಕ ಕೋಮುಗಲಭೆ ಸೃಷ್ಟಿಸಲು ನಡೆಸಿದ ವ್ಯವಸ್ಥಿತ ಪಿತೂರಿಯ ಜಾಲದ ಕುರಿತು ಸಮಗ್ರವಾದ ತನಿಖೆ ನಡೆಸಲು ಮತ್ತು ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರದ ಅಮಾಯಕ ಯುವಕನೊಬ್ಬನನ್ನು ಅನ್ಯಾಯವಾಗಿ ಎಳೆದು ತಂದು ಆತನ ಆತನ ಕುಟುಂಬದವರನ್ನು ತೇಜೋವಧೆ ಮಾಡಿರುವ ವಿಷಯಕ್ಕೆ ಸಂಬಂಧಿಸಿ ಅಲ್ಪಸಂಖ್ಯಾತ ಮುಖಂಡರ ನಿಯೋಗ ಮನವಿ ಪತ್ರ ಸಲ್ಲಿಸಿತು.

ನಿಯೋಗದಲ್ಲಿ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಉಪಾಧ್ಯಕ್ಷರಾದ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು),  ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷರಾದ ಪಿ.ಎ. ಹನೀಫ್, ಐಮಂಗಲ (ಕೊಮ್ಮೆತೋಡು) ಮುಸ್ಲಿಂ ಜಮಾಅತ್ತಿನ ಮಾಜಿ ಅಧ್ಯಕ್ಷರಾದ ಕೋಳುಮಂಡ ರಫೀಕ್, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಸದಸ್ಯರಾದ ಕೆ.ಎಂ. ಬಾವ ಮೊದಲಾದವರು ಇದ್ದರು.

Join Whatsapp