ಕೊಡಗು: ಮತಾಂತರ ಆರೋಪ, ಕೇರಳ‌ ಮೂಲದ ದಂಪತಿ ಪೊಲೀಸ್ ವಶ

Prasthutha|

ಮಡಿಕೇರಿ:‌ ಗಿರಿಜನರಿಗೆ ಆಮಿಷ ಒಡ್ಡಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೇರಳ ಮೂಲದ‌ ಕ್ರೈಸ್ತ ದಂಪತಿಯನ್ನು ಸಂಘಪರಿವಾರದ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ದಕ್ಷಿಣ ಕೊಡಗಿನ ಕುಟ್ಟದಲ್ಲಿ ನಡೆದಿದೆ.

- Advertisement -

ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಜೆಕಲ್ ಕಾಲೋನಿಯ ಒಳಗೆ ಕೇರಳ ಮೂಲದ  ಕ್ರೈಸ್ತ  ಮಿಷನರಿಗೆ ಸೇರಿದ ವ್ಯಕ್ತಿಗಳು ಹಲವು ಸಮಯದಿಂದ ಇದ್ದಾರೆ ಎನ್ನಲಾಗಿದೆ. ಈ  ಬಗ್ಗೆ ಸ್ಥಳೀಯರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರೆನ್ನಲಾಗಿದೆ.

ಕ್ರೈಸ್ತ ಮಿಷನರಿಗಳು ಇರುವ ಸುಳಿವು ದೊರೆತ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿ ಆರೋಪಿಗಳನ್ನು ಹಿಡಿದು ಕುಟ್ಟ ಪೊಲೀಸರಿಗೆ ಒಪ್ಪಿಸಿ,  ನೂತನವಾಗಿ ಜಾರಿಗೆ ಬಂದಿರುವ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.

- Advertisement -

ಇದು ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರ ಅಂಕಿತ ಬಿದ್ದ ನಂತರ ಜಿಲ್ಲೆಯಲ್ಲಿ ದಾಖಲಾದ  ಪ್ರಥಮ ಪ್ರಕರಣವಾಗಿದ್ದು, ಆರೋಪಿಗಳ ವಿರುದ್ದ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ‌ ನಡೆಸುತ್ತಿದ್ದಾರೆ.



Join Whatsapp