ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಕೊಡಗು ಚಲೋ ಮುಂದೂಡಿಕೆ: ಸಿದ್ದರಾಮಯ್ಯ

Prasthutha|

ಬೆಂಗಳೂರು: ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಕೊಡಗು ಚಲೋವನ್ನು ಮುಂದೂಡಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಹೋರಾಟದ ನಿಧಾ೯ರ ಕೈಗೊಳ್ಳಲಾಗುವುದು. ಪ್ರತಿಭಟನೆ ಮಾಡಲೇಬಾರದು ಎಂಬಂತೆ ನಿಷೇಧಾಜ್ಞೆ ಸರ್ಕಾರ ಹೇರಿದೆ. ವಿಪಕ್ಷ ನಾಯಕನಾಗಿ ಕಾನೂನಿಗೆ ಗೌರವ ನೀಡಿ ಪ್ರತಿಭಟನೆ ಮಾಡದೇ ಇರಲು ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂಬ ಉದ್ದೇಶದಿಂದ ಮಡಿಕೇರಿ ಚಲೋ ಮುಂದೂಡಲಾಗಿದೆ ಎಂದರು.

ಅತಿವೖಷ್ಟಿಯಿಂದ ತತ್ತರಿಸಿದ್ದ ಕೊಡಗಿನಲ್ಲಿ ಪರಿಸ್ಥಿತಿ ಅವಲೋಕಿಸಲು ತೆರಳಿದ್ದೆ. ಮಳೆಹಾನಿ ಸಂತ್ರಸ್ತರಿಗೆ ಸಕಾ೯ರ ಸೂಕ್ತ ವ್ಯವಸ್ಥೆಯನ್ನು ಇಂದಿಗೂ ಕಲ್ಪಿಸಿಲ್ಲ. ಪರಿಹಾರ ಕೂಡ ನೀಡಿಲ್ಲ. ಚೆಕ್ ಕೂಡ ಅಮಾನ್ಯಗೊಂಡಿದೆ ಎಂದು ಅವರು ತಿಳಿಸಿದರು.
ಪ್ರತಿಭಟನನಿರತರನ್ನು ಪೊಲೀಸರು ತಡೆಯುವ ಪ್ರಯತ್ನವನ್ನೇ ತಿತಿಮತಿಯಲ್ಲಿ ಮತ್ತು ಮಡಿಕೇರಿಯಲ್ಲಿ ಮಾಡಲಿಲ್ಲ. ಕಾಂಗ್ರೆಸ್ ಕಾಯ೯ಕತ೯ರ ಮೇಲೆ ಲಾಠಿ ಚಾಜ್೯ ಮಾಡಲಾಯಿತೇ ವಿನಃ ಸಂಘಪರಿವಾರದ ಸಂಘಟನೆಗಳ ಕಾಯ೯ಕತ೯ರನ್ನು ತಡೆಯುವ ಪ್ರಯತ್ನ ಪೊಲೀಸರು ಮಾಡಲಿಲ್ಲ. ಮಡಿಕೇರಿ ಸುದಶ೯ನ್ ಗೆಸ್ಟ್ ಹೌಸ್ ನಲ್ಲಿ ಊಟ ಮಾಡಿ ಕೊಡ್ಲಿಪೇಟೆಗೆ ತೆರಳುತ್ತಿರುವ ಸಂದಭ೯ ಗುಡ್ಡೆಹೊಸೂರುವಿನಲ್ಲಿ ಮತ್ತೆ ಮೊಟ್ಟೆ ಎಸೆದರು. ಎಲ್ಲಾ ಕಡೆ 15- 20 ಜನ ಹಿಂದುತ್ವ ಸಂಘಟನೆಗಳವರು ಪ್ರತಿಭಟನೆ ಮಾಡಿದ್ದರು. ಪೊಲೀಸರಿಗೆ ಪ್ರತಿಭಟನೆ ಬಗ್ಗೆ ಮಾಹಿತಿ ಇತ್ತು. ಹೀಗಿದ್ದರೂ ಪೊಲೀಸ್ ವರಿಷ್ಠಾಧಿಕಾರಿ ನಿಲ೯ಕ್ಷ್ಯ ವಹಿಸಿದರು ಎಂದು ನೇರವಾಗಿ ಸಿದ್ದರಾಮಯ್ಯ ಆರೋಪಿಸಿದರು.

- Advertisement -

ಕೊಡಗಿಗೆ ಬರಲಿ ನೋಡಿಕೊಳ್ಳುತ್ತೇವೆ ಎಂದು ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಬೆದರಿಕೆ ಹಾಕಿದ್ದಾರೆ. ನನಗೇ ಸವಾಲು ಹಾಕುತ್ತೀರಾ? ರೆಡ್ಡಿ ಬ್ರದರ್ಸ್ ಸವಾಲು ಹಾಕಿ ನಂತರ ಏನಾಯಿತು ಎಂಬುದನ್ನು ತಿಳಿದುಕೊಳ್ಳಿ ಎಂದು ಹೇಳಿದ ಸಿದ್ದರಾಮಯ್ಯ, ನಾವು ಸ್ವಾತಂತ್ರ್ಯ ಭಾರತದಲ್ಲಿ ಇಲ್ಲವೇ? ಪ್ರಶ್ನಿಸಿದರು.

ನಮ್ಮ ಪ್ರತಿಭಟನೆ ವಿರುದ್ಧವಾಗಿ ಅದೇ ದಿನ ಬಿಜೆಪಿ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿದೆ. ಆದರೆ ಇದು ದ್ವೇಷದ ಸಮಾವೇಶ. ಕಾಂಗ್ರೆಸ್ ಸಮಾವೇಶಕ್ಕೆ ಹೆದರಿ ಬಿಜೆಪಿಯಿಂದ ಸಮಾವೇಶ ಆಯೋಜನೆ ಮಾಡಲಾಗಿದೆ. ಮೊಟ್ಟೆ ಎಸೆಯುವುದು, ಕಪ್ಪು ಬಾವುಟ ತೋರಿಸುವುದಕ್ಕೆ ಯಾವುದೇ ಕಾರಣ ಇರಲಿಲ್ಲ. ಪ್ರತಿಭಟನೆ ನಮ್ಮ ಹಕ್ಕಾಗಿತ್ತು ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಪಕ್ಷ ನಾಯಕನಾಗಿ ಸದ್ಯಕ್ಕೆ ನಾನು ಪ್ರತಿಭಟನೆ ಮಾಡಲಾರೆ. ಮುಂದಿನ ದಿನಗಳಲ್ಲಿ ಸೂಕ್ತ ನಿಧಾ೯ರ ಕೈಗೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

Join Whatsapp