ಕೊಡಗು: ಪೊನ್ನಂಪೇಟೆ ವಿಭಾಗದ ಕಿರಿಯ ಎಂಜಿನಿಯರ್ ಗೆ‌ ಸೇರಿದ 5 ಸ್ಥಳಗಳ ಮೇಲೆ ಎಸಿಬಿ ದಾಳಿ

Prasthutha|

ಮಡಿಕೇರಿ: ಕೊಡಗು ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು  ಪಂಚಾಯತ್ ರಾಜ್ ಇಲಾಖೆಯ ಪೊನ್ನಂಪೇಟೆ ವಿಭಾಗದ ಕಿರಿಯ ಎಂಜಿನಿಯರ್ ಓಬಯ್ಯ ಅವರಿಗೆ‌ ಸೇರಿದ 5 ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಶುಕ್ರವಾರ ದಾಳಿ ನಡೆಸಿದ್ದಾರೆ.

- Advertisement -

ಪೊನ್ನಂಪೇಟೆಯ ಕಚೇರಿ, ಮೈಸೂರು ಜಿಲ್ಲೆಯ ಹುಣಸೂರಿನಲ್ಲಿರುವ ಅವರ ನಿವಾಸ, ಎರಡು ತೋಟದ ಮನೆಗಳು, ಅವರ ಸಹೋದರ ವಾಸವಿರುವ ಮೈಸೂರು ನಗರದ ಕುಕ್ಕರಹಳ್ಳಿಯ ನಿವಾಸದ ಮೇಲೆ 29 ಮಂದಿಯ ಎಸಿಬಿ ತಂಡವು ಬೆಳಿಗ್ಗೆ 5.45ಕ್ಕೆ ದಾಳಿ ನಡೆಸಿ, ದಾಖಲಾತಿಗಳು, ಹಣ, ಚಿನ್ನಾಭರಣಗಳ ಪರಿಶೀಲನೆ ನಡೆಸಿದೆ‌.

‘ಎಲ್ಲ ಬಗೆಯ ತಪಾಸಣೆ ಮುಗಿದ ನಂತರವಷ್ಟೇ ವಿವರ ಖಚಿತವಾಗಿ ಹೇಳಲು ಸಾಧ್ಯ‌‌‌. ಸದ್ಯ ಎಲ್ಲೆಡೆ ತಪಾಸಣೆ ನಡೆದಿದೆ’ ಎಂದು ಎಸಿಬಿಯ ಕೊಡಗು ಜಿಲ್ಲಾ ಡಿವೈಎಸ್ಪಿ ರಾಜೇಂದ್ರ ತಿಳಿಸಿದರು.

- Advertisement -

ಎಸಿಬಿಯ ಮೈಸೂರು ವಿಭಾಗದ ಎಸ್.ಪಿ.ಸಜಿತ್ ನೇತೃತ್ವದಲ್ಲಿ ಡಿವೈಎಸ್ಪಿ ರಾಜೇಂದ್ರ, ಸದಾನಂದ ತಿಪ್ಪಣ್ಣನವರ, ಇನ್‌ಸ್ಪೆಕ್ಟರ್‌ಗಳಾದ ಹರೀಶ್, ಕುಮಾರ್, ಚಿತ್ತರಂಜನ್, ಲಕ್ಷ್ಮೀಕಾಂತ ಸೇರಿದಂತೆ ಒಟ್ಟು 29 ಮಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Join Whatsapp