ಲಕ್ನೋ: ಇಲ್ಲಿಯ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 54ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ ತವರಲ್ಲೇ ಸೋಲು ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸುನಿಲ್ ನರೇನ್ ಅರ್ಧಶತಕದ ನೆರವಿನಿಂದ 6 ವಿಕೆಟ್ ಕಳೆದುಕೊಂಡು 235 ರನ್ ಕಲೆ ಹಾಕಿತ್ತು.
ಸುನಿಲ್ ನಾರಾಯಣ್ ಅವರ ಅಮೋಘ ಆಟದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 235 ರನ್ ಗಳ ಭರ್ಜರಿ ಮೊತ್ತ ಕಲೆ ಹಾಕಿತು. ಸುನಿಲ್ 39 ಎಸೆತಗಳಲ್ಲಿ ಬರೋಬ್ಬರಿ 81 ರನ್ ಚಚ್ಚಿದರು. ಸಾಲ್ಟ್ 32, ರಘುವಂಶಿ 32, ರಸ್ಸೆಲ್ 12, ರಿಂಕು ಸಿಂಗ್ 16, ನಾಯಕ ಶ್ರೇಯಸ್ ಅಯ್ಯರ್ 23 ರನ್ , ರಮಣದೀಪ್ ಸಿಂಗ್ ಔಟಾಗದೆ 6 ಎಸೆತಗಳಲ್ಲಿ 25 ರನ್ ಚಚ್ಚಿದರು. ನವೀನ್-ಉಲ್-ಹಕ್ 3 ವಿಕೆಟ್ ಕಿತ್ತರು. ಯಶ್ ಠಾಕೂರ್, ರವಿ ಬಿಷ್ನೋಯಿ ಮತ್ತು ಯುದ್ ವೀರ ಸಿಂಗ್ ತಲಾ 1 ವಿಕೆಟ್ ಪಡೆದರು.
ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಕನ್ನಡಿಗ ಕೆ ಎಲ್ ರಾಹುಲ್ ನೇತೃತ್ವದ ಲಕ್ನೋ ತಂಡವು 16.1 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 138 ರನ್ಗಳಷ್ಟೇ ಗಳಿಸಿತು. ಆ ಮೂಲಕ ತವರಲ್ಲೇ 98 ರನ್ಗಳ ಹೀನಾಯ ಸೋಲು ಕಂಡಿತು.
ನಾಯಕ ರಾಹುಲ್ 25, ಸ್ಟೋಯಿನಿಸ್ 36 ಹೊರತು ಪಡಿಸಿ ಉಳಿದ ಆಟಗಾರರು ನಿಲ್ಲಲಿಲ್ಲ. ಬಿಗಿ ದಾಳಿ ನಡೆಸಿದ ಕೆಕೆಆರ್ ಪರ ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ ತಲಾ 3 ವಿಕೆಟ್ ಪಡೆದರು. ರಸ್ಸೆಲ್ 2, ಸ್ಟಾರ್ಕ್ ಮತ್ತು ನಾರಾಯಣ್ ತಲಾ ಒಂದು ವಿಕೆಟ್ ಕಿತ್ತರು.
ಕೆಕೆಆರ್ ಒಟ್ಟು 11 ಪಂದ್ಯದಲ್ಲಿ ಎಂಟು ಗೆಲುವು ಹಾಗೂ ಮೂರು ಸೋಲಿನೊಂದಿಗೆ ಒಟ್ಟು ಸರಾಸರಿ 1.45 ನೆಟ್ ರನ್ರೇಟ್ ಗಳಿಸಿದೆ. ರಾಜಸ್ಥಾನ ತಂಡವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.